

ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಪುತ್ರ ತೇಜಸ್ ವರ್ತೂರು ಮೇಲೆ ನಾನ್ ಬೇಲೆಬಲ್ ವಾರೆಂಟ್ ಅನ್ನು ಘೋಷಿಸಲಾಗಿದ್ದು ಇದೀಗ ಅವರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಅಂದ ಹಾಗೆ ಮಾಜಿ ಎಂಎಲ್ಎ ಪುತ್ರನ ಮೇಲೆ ಸಿಸಿಎಚ್ 19 ಕೋರ್ಟ್ನಿಂದ ಎನ್ಬಿಡಬ್ಲ್ಯು ಜಾರಿಯಾಗಿದ್ದು ನಾನ್ ಬೇಲೆಬಲ್ ವಾರೆಂಟ್ ಜಾರಿ ಮಾಡಿದ್ದು ಬೆಂಗಳೂರು ಮೆಟ್ರೊಪಾಲಿಯನ್ ಮ್ಯಾಜಿಸ್ಟ್ರೇಟ್ನ ಮುಖ್ಯಸ್ಥರು.
ಚೆಕ್ ಬೌನ್ಸ್ ಪ್ರಕರಣ ಒಂದರಲ್ಲಿ ತೇಜಸ್ ವರ್ತೂರು ವಿರುದ್ಧ ಈ ವಾರೆಂಟ್ ಜಾರಿಯಾಗಿದೆ. ಸದ್ಯಕ್ಕೆ ಸದಾಶಿವನಗರ ಪೊಲೀಸರು ಮಾಜಿ ಶಾಸಕರ ಪುತ್ರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.