More

    ಯೂಟರ್ನ್ ಬೇಡ, ಇಲ್ಲಿಯೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ವರ್ತೂರು ಪ್ರಕಾಶ್ ಸಲಹೆ

    ಕೋಲಾರ: ಕೋಲಾರದಲ್ಲಿ ಸ್ಪರ್ಧೆಗೆ ನಾನು ಸಿದ್ಧ. ಆದರೆ ಸಿದ್ದರಾಮಯ್ಯ ಯೂ ಟರ್ನ್ ಹೊಡೆಯಬಾರದು. ಅವರು ನುಡಿದಂತೆ ಇಲ್ಲಿಯೇ ಸ್ಪರ್ಧಿಸಬೇಕು ಎಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಸಿದ್ದರಾಮಯ್ಯ ಕಡೆಯವರು ಮತ್ತು ಕುರುಬ ಸಮಾಜದ ಸ್ವಾಮೀಜಿ ಒತ್ತಡಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಅಥವಾ ತಟಸ್ಥವಾಗುತ್ತೇನೆ ಎಂದು ಸಾವಾಜಿಕ ಜಾಲತಾಣಗಳಲ್ಲಿ ಊಹಾಪೋಹದ ವರದಿ ಹರಿಯಬಿಡಲಾಗುತ್ತಿದೆ. ಇವೆಲ್ಲ ವಾಸ್ತವಕ್ಕೆ ದೂರವಿದ್ದು, ನನ್ನ ಮನವೊಲಿಕೆಗೆ ಯಾರೂ ಪ್ರಯತ್ನಿಸಿಲ್ಲ. ಹೈವೋಲ್ಟೇಜ್ ವಿದ್ಯುತ್ ತಂತಿಯಂತಿರುವ ನನ್ನನ್ನು ದಾರಿ ತಪ್ಪಿಸಲು ಬರುವವರು ಮುಟ್ಟಿದರೆ ಭಸ್ಮವಾಗುತ್ತಾರೆ ಎಂದರು.

    ನನ್ನನ್ನು ಯಾರೂ ಮನವೊಲಿಸಿಲ್ಲ: ಕುರುಬರ ಸ್ವಾಮೀಜಿ, ಭೈರತಿ ಸುರೇಶ್ ಸೇರಿ ಯಾರೂ ನನ್ನ ಮನವೊಲಿಕೆ ಯತ್ನ ವಾಡಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿ 2 ಬಾರಿ ಗೆದ್ದಿರುವ ನನಗೆ ಕಳೆದ ಬಾರಿ ವೈಯಕ್ತಿಕ ಸಮಸ್ಯೆ, ನನ್ನ ಬಳಿಯಿದ್ದ ಕೆಲವರೇ ನನ್ನ ವಿರುದ್ಧ ಕೆಲಸ ಮಾಡಿದ್ದರಿಂದ ಸೋಲುವಂತಾಯಿತು. ಸೋತು ಕಷ್ಟದಲ್ಲಿದ್ದಾಗ ಜತೆಗಿದ್ದವರು ಯಾರೆಂದು ಈಗ ಅರ್ಥವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಪ್ರವೇಶಿಸಿ, ಒಮ್ಮೆ ಸೋತಿದ್ದು ಬಿಟ್ಟರೆ ಎಲ್ಲ ಗೆಲುವೇ. ಹೀಗಾಗಿ ಸಿದ್ದರಾಮಯ್ಯ ಅಥವಾ ಯಾರೇ ಎದುರಾಳಿಯಾದರೂ ಎದುರಿಸುತ್ತೇನೆ. ನನ್ನನ್ನು ಮುಗಿಸಲು ಬಂದಿರುವ ಸಿದ್ದರಾಮಯ್ಯ ರಾಜಕೀಯ ಅಂತ್ಯ ಕೋಲಾರದಲ್ಲೇ ಆಗಲಿದೆ ಎಂದು ವರ್ತೂರು ಪ್ರಕಾಶ್ ಹೇಳಿದರು.

    ಸಿದ್ದರಾಮಯ್ಯ ಮೇಲಿನ ಗೌರವ ದೂರ: ಜ.9ರವರೆಗೆ ಸಿದ್ದರಾಮಯ್ಯ ಮೇಲೆ ಗೌರವವಿತ್ತು. ಆದರೆ ಅವರದೇ ಸಮುದಾಯದ ನನ್ನ ವಿರುದ್ಧ ಸ್ಪರ್ಧಿಸುವುದಾಗಿ ಪ್ರಕಟಿಸಿದ ಬಳಿಕ ಆ ಗೌರವ ದೂರವಾಯಿತು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಎಲ್ಸಿ ಅನಿಲ್ ಕುಮಾರ್ ಮತ್ತಿತರರು ಅವರನ್ನು ಕರೆತಂದರು ಎನ್ನುವುದಕ್ಕಿಂತ ನನ್ನನ್ನು ಮುಗಿಸಲೆಂದೇ ಸ್ವತಃ ಅವರೇ ಸ್ಪರ್ಧೆಗೆ ಮುಂದಾಗಿದ್ದಾರೆ ಎಂದು ವರ್ತೂರು ಆರ್.ಪ್ರಕಾಶ್ ಹೇಳಿದರು.


    ಕೋಲಾರದಲ್ಲಿ ಸ್ಪರ್ಧೆ ಬೇಡ: ಕುರುಬರ ಸಂ ಜಿಲ್ಲಾಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮಾತನಾಡಿ, ವರ್ತೂರು ಆರ್.ಪ್ರಕಾಶ್ ಸಮಾಜಕ್ಕೆ ಆಶ್ರಯವಾಗಿದ್ದಾರೆ.
    ಅವರ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಬಾರದು. ಕುರುಬರು ಮಾತ್ರ ಯಾರನ್ನಾದರೂ ಗೆಲ್ಲಿಸುತ್ತಾರೆ ಎಂಬುದು ಸರಿಯಲ್ಲ, 26 ಸಾವಿರ ಮತವಿದ್ದು ಸೋಲಿಸುವ ಶಕ್ತಿ ಸಮುದಾಯಕ್ಕೆ ಇದೆ ಎಂದರು.ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ವಾಜಿ ಅಧ್ಯಕ್ಷ ಅರುಣ್ ಪ್ರಸಾದ್, ಮುಖಂಡರಾದ ಬಂಕ್ ಮಂಜುನಾಥ್, ನಗರಸಭಾ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಕಾಶಿ ವಿಶ್ವನಾಥ್ ಇತರರು ಇದ್ದರು.

    ಸಿದ್ದರಾಮಯ್ಯ 3ನೇ ಸ್ಥಾನಕ್ಕೆ
    ಕುರುಬ ಸಮಾಜದಲ್ಲಿ ಒಡಕಿಲ್ಲ. ಎಲ್ಲ ಸಮುದಾಯಗಳಂತೆ ಆ ಸಮುದಾಯವೂ ನನ್ನ ಬೆಂಬಲಕ್ಕಿದೆ. ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಬೆಂಬಲಿಗರಾದ ಗಿರಿಜಮ್ಮ ರಾಮಸ್ವಾಮಿ, ಕಠಾರಿಪಾಳ್ಯದ ಕೈಲಾಸ್ ನಾಥ್, ಶಿವಕುವಾರ್, ಗೌರಿಪೇಟೆ ಚಿನ್ನಿ ಅನಂತ್ ಮೊದಲಿನಿಂದಲೂ ನನ್ನ ವಿರುದ್ಧವಿದ್ದಾರೆ. 100 ಓಟು ತೆಗೆಯುವ ಸಾಮರ್ಥ್ಯವೂ ಅವರಿಗಿಲ್ಲ. ಕಾಂಗ್ರೆಸ್ ನಾಯಕರಿಗೆ ಅಂತಹ ಶಕ್ತಿ ಇದ್ದಿದ್ದರೆ ಸಿದ್ದರಾಮಯ್ಯ ಬಂದಾಗ ಪ್ರಮುಖ ಸವಾಜಗಳಿಂದ ತಲಾ 2 ಸಾವಿರ ಮಂದಿ ಬಂದಿದ್ದರೂ 20 ಸಾವಿರ ಜನ ಸೇರಬೇಕಿತ್ತು. ಆದರೆ 5 ಸಾವಿರ ಜನರನ್ನೂ ಸೇರಿಸಲಾಗದೆ ನನ್ನ ಸವಾಲು ಸ್ವೀಕರಿಸದೆ ಹೋದರು. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆಯಿದ್ದು, ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರು ಪ್ರಧಾನಿ ಮೋದಿಯವರು ಮತ್ತು ನನ್ನ ಅಭಿವದ್ಧಿ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಸಿದ್ದರಾಮಯ್ಯ 3ನೇ ಸ್ಥಾನಕ್ಕೆ ತಪ್ತಿಪಟ್ಟುಕೊಳ್ಳಬೇಕಾಗುತ್ತದೆ ಎಂದು ವರ್ತೂರು ಪ್ರಕಾಶ್ ಭವಿಷ್ಯ ನುಡಿದರು.

    ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ
    ಸ್ಪರ್ಧೆಗೆ ಒಲವಿದೆ, ಆದರೆ ಹೈಕವಾಂಡ್ ಕೈಯ್ಯಲ್ಲಿದೆ ಎಂದು ಹೇಳಿ, ಇದೀಗ ನೈಜ ಚಿತ್ರಣ ಅರ್ಥವಾಗುತ್ತಿದ್ದಂತೆ ವರುಣಾ ಅಥವಾ ಬೇರೆಡೆ ನಿಲ್ಲಲು ತಯಾರಿ ನಡೆಸಿರುವ ವಾಹಿತಿ ಇದೆ. ಆದರೆ ಅವರು ಹಾಗೆ ವಾಡಿದರೆ ಸ್ಪರ್ಧೆಗೆ ಮುನ್ನ ಸೋಲೊಪ್ಪಿಕೊಂಡು ಪಲಾಯನ ವಾಡಿದ ಅಪಕೀರ್ತಿ ಬರುತ್ತದೆ. ಶಾಸಕ ಕೆ.ಶ್ರೀನಿವಾಸಗೌಡ ಮತ್ತಿತರರು ಇವರನ್ನು ಗೆಲ್ಲಿಸಿಕೊಂಡು ಬರುವ ತಾಕತ್ ಇರುವವರೇ. ಹೀಗಾಗಿ ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ವರ್ತೂರು ಸವಾಲ್ ಹಾಕಿದರು.

    ಸಮುದಾಯಗಳ ವಿರೋಧ
    ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್, ಕೆ.ಆರ್‌ಪುರದಲ್ಲಿ ಎ.ಕೃಷ್ಣಪ್ಪ, ಬೆಳಗಾವಿಯಲ್ಲಿ ವಿ.ಎಲ್.ಪಾಟೀಲ್ ಪುತ್ರರು, ಮಂಡ್ಯದಲ್ಲಿ ಇನ್ನಷ್ಟೇ ಬೆಳೆಯಬೇಕಿದ್ದ ನಿಖಿಲ್ ಕುಮಾರಸ್ವಾಮಿ ಅವರೆಲ್ಲರ ರಾಜಕೀಯ ಭವಿಷ್ಯ ಮುಗಿಸಿದ್ದು ಸಿದ್ದರಾಮಯ್ಯ. ಹಾಲು ಹಾಕಿದ ಮನೆಯಲ್ಲಿ ಕರು ಸಾಯಲಿ ಎಂಬ ಮನೋಸ್ಥಿತಿಯ ಸಿದ್ದರಾಮಯ್ಯ ವಿರುದ್ಧ ದಲಿತರು, ಗೊಲ್ಲರು, ಒಕ್ಕಲಿಗರು ಸೇರಿ ವಿವಿಧ ಸಮುದಾಯಗಳು ಸೇಡು ತೀರಿಸಿಕೊಳ್ಳಲು ಕಾಯುತ್ತಿವೆ ಎಂದು ವರ್ತೂರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts