10 ದಿನಗಳಲ್ಲೇ ವೈಎಸ್​ಆರ್​ ಕಾಂಗ್ರೆಸ್ ಪಕ್ಷ​ ತೊರೆದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು!

rayudu web
Published on

ಹೈದರಾಬಾದ್​: ಟೀಮ್​ ಇಂಡಿಯಾ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಮಾಜಿ ಬ್ಯಾಟರ್​ ಅಂಬಟಿ ರಾಯುಡು ಅವರ ರಾಜಕೀಯ ಜೀವನ 10 ದಿನಗಳಲ್ಲೇ ಮುಕ್ತಾಯಗೊಂಡಿದೆ. ಕಳೆದ ವರ್ಷಾಂತ್ಯದಲ್ಲಿ ಡಿಸೆಂಬರ್​ 28ರಂದು ಆಂಧ್ರದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದ ರಾಯುಡು ಶನಿವಾರ ಪಕ್ಷದಿಂದ ಹೊರನಡೆದಿದ್ದಾರೆ. ಜತೆಗೆ ಸದ್ಯಕ್ಕೆ ರಾಜಕೀಯದಿಂದ ದೂರವಿರುವುದಾಗಿಯೂ ಸಾಮಾಜಿಕ ಜಾಲತಾಣ "ಎಕ್ಸ್​'ನಲ್ಲಿ ಘೋಷಿಸಿದ್ದಾರೆ. ಅವರ ಈ ದಿಢೀರ್​ ಯು-ರ್ಟನ್​ಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net