ಪೀಕ್​ನಲ್ಲಿರುವಾಗಲೇ ನನ್ನ ಕೆರಿಯರ್​ ಹಾಳು ಮಾಡಿದರು; MS Dhoni ಹೆಸರೇಳದೆ ಕಿಡಿಕಾರಿದ ಮಾಜಿ ಕ್ರಿಕೆಟಿಗ

MS Dhoni
Published on

ಮುಂಬೈ: ಟೀಮ್​ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್​ ಕೂಲ್​ ಎಂದೇ ಹೆಸರುವಾಸಿಯಾಗಿದ್ದ ಮಹೇಂದ್ರ ಸಿಂಗ್​ ಧೋನಿ (MS Dhoni) ಅವರ ಗರಡಿಯಲ್ಲಿ ಅನೇಕ ಪ್ರತಿಭೆಗಳು ಟೀಮ್​ ಇಂಡಿಯಾ ಪರ ಆಡಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಐಪಿಎಲ್​ ಮತ್ತು ರಾಷ್ಟ್ರೀಯ ತಂಡದಲ್ಲಿ ಧೋನಿ ನಾಯಕತ್ವದಡಿಯಲ್ಲಿ ಅನೇಕ ಆಟಗಾರರು ಮುನ್ನೆಲೆಗೆ ಬಂದಿದ್ದು, ಈಗಲೂ ಆ ಆಟಗಾರರು ಧೋನಿ ಅವರನ್ನು ನೆನೆಸುತ್ತಾರೆ. ಇದೀಗ ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಕೆರಿಯರ್​ ಹಾಳಾಗಲು ಧೋನಿ ಕಾರಣ ಎಂದು ಕಿಡಿಕಾರಿದ್ದು, ಕ್ಯಾಪ್ಟನ್​ಬ ಕೂಲ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ (Manoj Tiwary), ಕೆಲವೊಮ್ಮೆ ಈಗಾಗುತ್ತದೆ. ಏಕೆಂದರೆ ನಾನು 2011ರಲ್ಲಿ ರಾಷ್ಟ್ರೀಯ ತಂಡದ ಪರ ಆಡುವಾಗ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದೆ. ಇದಾದ ಬಳಿಕ ನಡೆದ ಪಂದ್ಯದಲ್ಲಿ ನನಗೆ ಅವಕಾಶ ಕೊಡಲಿಲ್ಲ. ಇದಾದ ಎಂಟು ತಿಂಗಳ ಬಳಿಕ ನನಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು.

Dhoni Tiwary

ಕೆರಿಯರ್​ ಪೀಕ್​ನಲ್ಲಿ ಇರುವ ಸಮಯದಲ್ಲಿ ನನ್ನನ್ನು ತಂಡದಿಂದ ಕೈ ಬಿಡಲಾಗಿತ್ತು. ಈ ನಡೆ ಸಂಪೂರ್ಣವಾಗಿ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿತು. ಅಂದು ನಾಯಕರಾಗಿದ್ದವರು (MS Dhoni) ನನಗೆ ಅವಕಾಶ ಕೊಟ್ಟಿದ್ದರೆ ಬೇರೆ ಆಟಗಾರರಂತೆ ನನ್ನ ಹೆಸರು ಕೂಡ ಇನ್ನೂ ಚಾಲ್ತಿಯಲ್ಲಿ ಇರುತ್ತಿತ್ತು  ಎಂದು ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ ಧೋನಿ (MS Dhoni) ಹೆಸರೇಳದೆ ಕಿಡಿಕಾರಿದ್ದಾರೆ.

ಇನ್ನೂ ಐಪಿಎಲ್​ ರಿಟೇನ್​ ನಿಯಮಕ್ಕೆ (IPL Retain Rules) ಸಂಬಂಧಿಸಿದಂತೆ ಅಕ್ಟೋಬರ್​ 31ರಂದು ಫ್ರಾಂಚೈಸಿಗಳು ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಿದ್ದು, ಈ ಬಗ್ಗೆ ಧೋನಿ (MS Dhoni) ಇನ್ನೂ ನಿರ್ಧಾರ ತೆಗೆದುಕೊಳ್ಳದೆ ಇರುವುದು ಸಿಎಸ್​ಕೆ ದೊಡ್ಡ ತಲೆನೋವಾಗಿಪರಿಣಮಿಸಿದೆ. ಕ್ಯಾಪ್ಟನ್​ ಕೂಲ್​ ನಿವೃತ್ತಿ ಘೋಷಿಸುತ್ತಾರಾ ಅಥವಾ ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ಕಣಕ್ಕಿಳಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net