ದಕ್ಷಿಣ ಕನ್ನಡ-ಉಡುಪಿ Legislative Council By election; ಬಿಜೆಪಿ ಅಭ್ಯರ್ಥಿಗೆ ಗೆಲುವು, ಕಾಂಗ್ರೆಸ್​ಗೆ ಭಾರೀ ಮುಖಭಂಗ

Kishor Kumar Botyadi
Published on

ದಕ್ಷಿಣ ಕನ್ನಡ:  ಮೇ ತಿಂಗಳಲಲ್ಲು ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಕೋಟಾ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ದಕ್ಷಿಣ ಕನ್ನಡ-ಉಡುಪಿ ವಿಧಾನಪರಿಷತ್​ಗೆ (ನಡೆದ ಉಪಚುನಾವಣೆಯಲ್ಲಿ (legislative Council By Election) ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದು, ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ (Dakshin Kannda-Udupi District) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ (Legislative Council By Election) ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು 1,697 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ರಾಜು ಪೂಜಾರಿ 1,957 ಮತ ಗಳಿಸುವ ಮೂಲಕ ಸೋಲೊಪ್ಪಿಕೊಂಡರು.

ಅಕ್ಟೋಬರ್​ 21ರಂದು ನಡೆದ ಉಪಚುನಾವಣೆಯಲ್ಲಿ 392 ಮತಗಟ್ಟೆಗಳಲ್ಲಿ 5,906 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಈ ಪೈಕಿ 5,819 ಮತಗಳನ್ನು ಸಿಂಧು ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದರು. 87 ಮತಗಳು ತಿರಸ್ಕೃತವಾಗಿದ್ದವು. ಇಂದು ನಡೆದ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್​ ಕುಮಾರ್​ ಒಟ್ಟು 3,654 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.

ಕಳೆದ (2021ರ ಡಿಸೆಂಬರ್ 10 ರಂದು) ಚುನಾವಣೆಯಲ್ಲಿ 6,012 ಮತ ಚಲಾವಣೆಯಾಗಿದ್ದು, 5,955 ಮತಗಳು ಸಿಂಧುವಾಗಿದ್ದವು. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, 3672, ಮಂಜುನಾಥ ಭಂಡಾರಿ 2079, ಎಸ್ಪಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು. ಕೋಟ ಶ್ರೀನಿವಾಸ ಪೂಜಾರಿ 1593 ಮತಗಳ ಅಂತರದಿಂದ ಗೆದ್ದಿದ್ದರು.

https://www.vijayavani.net/india-lose-rohit-sharma-for-0-after-washington-sundars-7-wicket-haul-new-zealand-259

https://www.vijayavani.net/nikhil-kumaraswamy-to-contest-as-jds-candiate-in-channapattana-by-election

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net