ಟ್ರಕ್​ ಡ್ರೈವರ್​ ಕಾಲರ್ ಹಿಡಿದು ಗಂಭೀರ್​ ಆಕ್ರೋಶ! ಗೌತಿ ರೌದ್ರಾವತಾರಕ್ಕೆ ಬೆಚ್ಚಿದ ಮಾಜಿ ಕ್ರಿಕೆಟಿಗ

Gautam Gambhir

ನವದೆಹಲಿ: ಟೀಮ್​ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಕ್ರಮಣಕಾರಿ ಸ್ವಭಾವದವರು ಎಂಬುದು ಕ್ರೀಡಾಭಿಮಾನಿಗಳಿಗೆ ತಿಳಿದಿದೆ. ಆಟಗಾರನಾಗಿದ್ದಾಗ ಎಷ್ಟೋ ಬಾರಿ ಕ್ರೀಡಾಂಗಣದಲ್ಲೇ ಜಗಳ ಆಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಲಭ್ಯವಿದೆ.

ಅಂದಹಾಗೆ ಟೀಮ್​ ಇಂಡಿಯಾದ ಟಾಪ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಜೊತೆಯೂ ಹಲವು ಬಾರಿ ಗಂಭೀರ್​ ಜಗಳವಾಡಿರುವುದು ಗೊತ್ತೇ ಇದೆ. ಐಪಿಎಲ್ ಸಮಯದಲ್ಲಿ ಒಮ್ಮೆ ಆಟಗಾರನಾಗಿದ್ದಾಗ ಮತ್ತೊಮ್ಮೆ ಮೆಂಟರ್ ಆಗಿದ್ದಾಗ ಗಂಭೀರ್ ಅವರು ಕೊಹ್ಲಿ ಜತೆ ಜಗಳಕ್ಕಿಳಿದು ಸಂಚಲನ ಮೂಡಿಸಿದ್ದರು. ತುಂಬಾ ಕೋಪ ಸ್ವಭಾವದ ಗಂಭೀರ್,​ ಒಮ್ಮೆ ಟ್ರಕ್​ ಚಾಲಕನೊಬ್ಬನ ಕುತ್ತಿಗೆಗೆ ಕೈಹಾಕಿ, ಕಾಲರ್​ ಹಿಡಿದು ಜಗಳವಾಡಿದ್ದರಂತೆ. ಈ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು ಮಾತನಾಡಿದ್ದಾರೆ.

ದೆಹಲಿ ಮೂಲದ ಗಂಭೀರ್, ತಮ್ಮ ರಾಜ್ಯ ತಂಡಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದರು. ಅಲ್ಲಿ ಮಿಂಚುವ ಮೂಲಕ ಉತ್ತಮ ಹೆಸರು ಗಳಿಸಿ, ನಂತರ ಭಾರತ ತಂಡಕ್ಕೆ ಆಯ್ಕೆಯಾದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಗೌತಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಆಟಗಾರನಾಗಿ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಗೌತಿ ಇದೀಗ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಮತ್ತು ಗೌತಿ ಅವರ ಸಹ ಆಟಗಾರ ಆಕಾಶ್ ಚೋಪ್ರಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನಡೆದ ಘಟನೆಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಗಂಭೀರ್ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ತನ್ನನ್ನು ತಾನು ಸುಧಾರಿಸಿಕೊಳ್ಳಲು ಪ್ರತಿ ಹಂತದಲ್ಲೂ ಪ್ರಯತ್ನಿಸುತ್ತಿದ್ದರು. ಬ್ಯಾಟ್‌ನಿಂದ ಸಿಡಿಯುವ ಉತ್ಸಾಹವನ್ನು ಹೊಂದಿದ್ದರು. ಆದರೆ, ಅವರಿಗೆ ಮೂಗಿನ ತುದಿಯಲ್ಲೇ ಕೋಪ ಇದೆ. ಒಮ್ಮೆ ಟ್ರಕ್ ಡ್ರೈವರ್ ಜೊತೆ ಜಗಳ ಮಾಡಿಕೊಂಡರು. ಈ ಘಟನೆ ದೆಹಲಿಯಲ್ಲಿ ನಡೆಯಿತು ಎಂದರು.

ಕಾರಿನಿಂದ ಕೆಳಗಿಳಿದ ಗೌತಿ ನೇರವಾಗಿ ಲಾರಿ ಹತ್ತಿ ಚಾಲಕನ ಕಾಲರ್ ಹಿಡಿದಿದ್ದರು. ಲಾರಿಯಲ್ಲಿ ರಾಂಗ್ ಟರ್ನ್ ತೆಗೆದುಕೊಂಡಿದ್ದಲ್ಲದೆ, ಆತ ಕಟು ಶಬ್ದಗಳಿಂದ ನಿಂದಿಸಿದ್ದಕ್ಕೆ ಗಂಭೀರ್‌ ಅವರಿಗೆ ಚಾಲಕನ ಮೇಲೆ ತುಂಬಾ ಕೋಪವಿತ್ತು. ಅದನ್ನು ನಿಯಂತ್ರಿಸಲು ಸಾಧ್ಯವಾಗದೇ ಕಾರಿನಿಂದ ಕೆಳಗೆ ಇಳಿದು, ಲಾರಿಯ ಮೇಲೆ ಹತ್ತಿ ಚಾಲಕನ ಕಾಲರ್ ಹಿಡಿದಿದ್ದರು. ಈ ವೇಳೆ ನೀವು ಏನು ಮಾಡುತ್ತಿದ್ದೀರಿ ಎಂಬುದು ನಿಮಗೆ ಅರ್ಥವಾಗುತ್ತಿದೆಯೇ ಎಂದು ಹೇಳಿ ಗಂಭೀರ್ ಅವರನ್ನು ತಡೆಯಲು ಪ್ರಯತ್ನಿಸಿದೆ. ನಾನು ತಡೆದರೂ ಗಂಭೀರ್ ಕೋಪ ಕಡಿಮೆಯಾಗಲಿಲ್ಲ. ಏನಾದರೂ ತಪ್ಪಾದರೆ ಅವರು ಸಹಿಸುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ಜಾನಿ ಮಾಸ್ಟರ್​ ವ್ಯಾನ್‌ ಒಳಗೆ ಪ್ಯಾಂಟ್‌ ಜಿಪ್ ಓಪನ್ ಮಾಡ್ತಿದ್ರು​, ಅವರ ಪತ್ನಿ ಕೂಡ…ಸಂತ್ರಸ್ತೆಯ ಸ್ಫೋಟಕ ಹೇಳಿಕೆ

ಮಗನ 83 ಕೆಜಿ ತೂಕದಷ್ಟೇ ಹಣವಿಟ್ಟು ತುಲಾಭಾರ ನೇರವೇರಿಸಿದ ರೈತ! ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…