ಜಾನಿ ಮಾಸ್ಟರ್​ ವ್ಯಾನ್‌ ಒಳಗೆ ಪ್ಯಾಂಟ್‌ ಜಿಪ್ ಓಪನ್ ಮಾಡ್ತಿದ್ರು​, ಅವರ ಪತ್ನಿ ಕೂಡ…ಸಂತ್ರಸ್ತೆಯ ಸ್ಫೋಟಕ ಹೇಳಿಕೆ

Jani Mastersexual harassment: ನೃತ್ಯ ಸಂಯೋಜಕ ಜಾನಿ ಮಾಸ್ಟರ್​ಗೆ ನೀಡಬೇಕಿದ್ದ ರಾಷ್ಟ್ರೀಯ ಪ್ರಶಸ್ತಿ ರದ್ದು

ಹೈದರಾಬಾದ್​: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನ ವಿಶೇಷ ಡಾನ್ಸ್​ ಸಂಯೋಜನೆಯಿಂದಲೇ ಖ್ಯಾತಿ ಗಳಿಸಿರುವ ಡ್ಯಾನ್ಸ್​ ಕೋರಿಯೋಗ್ರಾಫರ್ ಜಾನಿ ಮಾಸ್ಟರ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.​ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾನಿ ಮಾಸ್ಟರ್​ ಕನ್ನಡದಲ್ಲೂ ಕೆಲ ಹಾಡುಗಳಿಗೆ ಡಾನ್ಸ್ ಡ್ಯಾನ್ಸ್​ ಕೋರಿಯೋಗ್ರಫಿ ಮಾಡಿದ್ದಾರೆ. ಅದರಲ್ಲೂ ನಟ ಸುದೀಪ್​ ನಟನೆಯ ವಿಕ್ರಾಂತ್​ ರೋಣ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ಹಿಟ್​ ಆಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೇ ಜಾನಿ ಮಾಸ್ಟರ್​ ವಿರುದ್ಧ ಇದೀಗ ಅತ್ಯಾಚಾರ ಎಸಗಿದ ಗಂಭೀರ ಆರೋಪ ಕೇಳಿಬಂದಿದೆ. ಆರೋಪ ಮಾಡಿದ ಯುವತಿಯು ಕೂಡ ಡ್ಯಾನ್ಸ್​ ಕೋರಿಯೋಗ್ರಾಫರ್.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಪೊಲೀಸರ ಮುಂದೆ ಹಾಜರಾದ ಸಂತ್ರಸ್ತೆ, ಜಾನಿ ಮಾಸ್ಟರ್ ವಿರುದ್ಧ ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾಳೆ. ಮೂರು ಗಂಟೆಗಳ ಕಾಲ ಪೊಲೀಸ್​ ಅಧಿಕಾರಿಗಳ ಬಳಿ ತನ್ನ ಹೇಳಿಕೆಯನ್ನು ಸಂತ್ರಸ್ತೆ ದಾಖಲಿಸಿದ್ದಾಳೆ. ಅಲ್ಲದೆ, ಆಕೆಯನ್ನು ಭರೋಸಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪ್ರತಿದಿನ ಶೂಟಿಂಗ್ ಸಮಯದಲ್ಲಿ ವ್ಯಾನ್‌ನಲ್ಲಿ ಬಂದು ಪ್ಯಾಂಟ್‌ನ ಜಿಪ್ ಓಪನ್​ ಮಾಡಿ ಬಲವಂತ ಮಾಡುತ್ತಿದ್ದರು. ತನ್ನ ಲೈಂಗಿಕ ಆಸೆಗಳನ್ನು ಈಡೇರಿಸಿಕೊಳ್ಳಲು ನನಗೆ ಕಿರುಕುಳ ನೀಡಿದ್ದಾನೆ. ಆಫರ್​ಗಳು ಬೇಕಾದರೆ ಕಾಮತೃಷೆ ತೀರಿಸುವಂತೆ ಒತ್ತಾಯಿಸಿದ್ದಾನೆ. ಮುಂಬೈ ಹೋಟೆಲ್‌ನಲ್ಲಿ ಮಾತ್ರವಲ್ಲದೆ ಹೈದರಾಬಾದ್‌ನಲ್ಲಿಯೂ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾಳೆ.

ಆಸೆಯನ್ನು ಈಡೇರಿಸದಿದ್ದರೆ ಹಲ್ಲೆ ನಡೆಸುವುದಾಗಿಯೂ ಬೆದರಿಕೆ ಹಾಕಿದ್ದರು. ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಇಬ್ಬರೂ ಮನೆಗೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮತಾಂತರಗೊಂಡು ಮದುವೆಯಾಗುವಂತೆ ಜಾನಿ ಮಾಸ್ಟರ್ ನನ್ನ ಮೇಲೆ ಒತ್ತಡ ಹೇರಿದ್ದರು ಎಂದೂ ಸಂತ್ರಸ್ತೆ ಸ್ಫೋಟಕ ಆರೋಪಗಳನ್ನು ಮಾಡಿದ್ದಾಳೆ.

ಜಾನಿ ಮಾಸ್ಟರ್ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), ಕ್ರಿಮಿನಲ್ ಬೆದರಿಕೆ (506) ಮತ್ತು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು (323) ಕಲಂ (2) ಮತ್ತು (ಎನ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಾಗಿರುವುದು ಇದೇ ಮೊದಲಲ್ಲ, ಈ ವರ್ಷದ ಜೂನ್‌ನಲ್ಲಿ ಡ್ಯಾನ್ಸರ್ ಸತೀಶ್ ಕೂಡ ಜಾನಿ ಮಾಸ್ಟರ್ ವಿರುದ್ಧ ದೂರು ನೀಡಿದ್ದರು. ಜಾನಿ ಸಿನಿಮಾ ಶೂಟಿಂಗ್‌ನಲ್ಲಿ ಕೆಲಸ ಕೊಡಿಸದಂತೆ ತಡೆಯುತ್ತಿದ್ದಾರೆ ಎಂದು ಸತೀಶ್ ಆರೋಪಿಸಿದ್ದರು. (ಏಜೆನ್ಸೀಸ್)

‘ರೌಡಿ ಬೇಬಿ’ ಖ್ಯಾತಿಯ ಡ್ಯಾನ್ಸ್​ ಮಾಸ್ಟರ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ! ದೂರು​ ದಾಖಲು

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…