

ಶಿಮ್ಲಾ: ಚಿರತೆ ನೇರವಾಗಿ ಬೆಳೆದಿರುವ ಸಣ್ಣ ಮರದಿಂದ ಕೆಳಗಿಳಿಯುವ ಅಪರೂಪದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಫ್ಎಸ್) ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್ ಖಾತೆಗೆ 30 ಸೆಕೆಂಡುಗಳ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಚಿರತೆ ಮರದಿಂದ ಇಳಿಯುವ ದೃಶ್ಯ ವೈರಲ್ ಆಗಿದೆ.
ನೇರ ಹಾಗೂ ತುಂಬಾ ಎತ್ತರದ ಮರದಿಂದ ಚಿರತೆ ಇಳಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರು ಉತ್ರಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಬದುಕಿನ ಅಪರೂಪದ ಕ್ಷಣಗಳನ್ನು ಪರಿಚಯಿಸುವ ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಂದಿ ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಈ ರೀತಿಯ ವಿಡಯೋಗಳು ವೈರಲ್ ಆಗುತ್ತವೆ. (ಏಜೆನ್ಸೀಸ್)