ವಿರಾಟ್​ ಕೊಹ್ಲಿ ಆರೆಂಜ್​ ಕ್ಯಾಪ್ ಗೆದ್ದರೂ ಕಪ್​ ಒಲಿಯುವ ಗ್ಯಾರಂಟಿ ಇಲ್ಲ! ಹೀಗಿದೆ ಕಾರಣ...

web kohli
Published on

ಅಹಮದಾಬಾದ್: ಆರ್​ಸಿಬಿಯ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ 708 ರನ್​ಗಳೊಂದಿಗೆ ಹಾಲಿ ಐಪಿಎಲ್​ ಟೂರ್ನಿಯ ಟಾಪ್​ ಸ್ಕೋರರ್​ ಆಗಿದ್ದು, 2ನೇ ಸ್ಥಾನದಲ್ಲಿರುವ ಋತುರಾಜ್​ ಗಾಯಕ್ವಾಡ್​ಗಿಂತ (583) 125 ರನ್​ ಮುನ್ನಡೆಯಲ್ಲಿದ್ದಾರೆ. ಆರ್​ಸಿಬಿ ಫೈನಲ್​ಗೇರಿದರೆ ಕೊಹ್ಲಿ ಇನ್ನೂ 3 ಪಂದ್ಯ ಆಡುವ ಅವಕಾಶ ಲಭಿಸಲಿದೆ. ಆದರೆ ಕೊಹ್ಲಿ ಆರೆಂಜ್​ ಕ್ಯಾಪ್​ ಗೆಲುವು ಆರ್​ಸಿಬಿಗೆ ಕಪ್​ ಗೆಲುವಿನ ಗ್ಯಾರಂಟಿ ನೀಡುವುದಿಲ್ಲ!

ಯಾಕೆಂದರೆ ಐಪಿಎಲ್​ನಲ್ಲಿ ಇದುವರೆಗೆ ಬ್ಯಾಟರ್​ 700 ಪ್ಲಸ್​ ರನ್​ ಸಿಡಿಸಿದಾಗ ಒಮ್ಮೆ ಮಾತ್ರ ಕಪ್​ ಗೆದ್ದ ದೃಷ್ಟಾಂತವಿದೆ. 2016ರಲ್ಲಿ ಡೇವಿಡ್​ ವಾರ್ನರ್​ (848) ಈ ಸಾಧನೆ ಮಾಡಿದ್ದರು. ಅದೇ ವರ್ಷ ಕೊಹ್ಲಿ 973 ರನ್​ ಸಿಡಿಸಿದಾಗ ಕಪ್​ ಗೆದ್ದಿರಲಿಲ್ಲ. 2012ರಲ್ಲಿ ಕ್ರಿಸ್​ ಗೇಲ್​ 733, 2013ರಲ್ಲಿ ಮೈಕೆಲ್​ ಹಸ್ಸೆ 733, 2018ರಲ್ಲಿ ಕೇನ್​ ವಿಲಿಯಮ್ಸನ್​ 735, 2022ರಲ್ಲಿ ಬಟ್ಲರ್​ 863, 2023ರಲ್ಲಿ ಶುಭಮಾನ್​ ಗಿಲ್​ 890 ರನ್​ ಸಿಡಿಸಿದಾಗಲೂ ಕಪ್​ ಗೆದ್ದಿರಲಿಲ್ಲ.

ಇನ್ನು ವಿರಾಟ್​ ಕೊಹ್ಲಿ 2023ರ ಏಕದಿನ ವಿಶ್ವಕಪ್​ (765) ಮತ್ತು 2014 ಮತ್ತು 2022ರ ಟಿ20 ವಿಶ್ವಕಪ್​ಗಳಲ್ಲಿ ಗರಿಷ್ಠ ರನ್​ ಸ್ಕೋರರ್​ ಆದಾಗಲೂ ಭಾರತ ಕಪ್​ ಗೆದ್ದಿರಲಿಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net