

Diabetes: ಇಂದಿನ ದಿನಗಳಲ್ಲಿ ಮಧುಮೇಹ ಎಂಬುದು ಸರಳವಾದ ಕಾಯಿಲೆ. ಆದರೆ, ಇದು ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆರಂಭದಲ್ಲಿ, ಇದು ಮೌನವಾಗಿದ್ದು, ಯಾವುದೇ ಪ್ರಮುಖ ನೋವು ಅಥವಾ ಗಮನಾರ್ಹ ಬದಲಾವಣೆಗಳನ್ನು ತೋರಿಸುವುದಿಲ್ಲ, ಅದಕ್ಕಾಗಿಯೇ ಇದನ್ನು "ಮೂಖ ಕೊಲೆಗಾರ" ಎಂದು ಕರೆಯುತ್ತಾರೆ.
ಜನರಿಗೆ ಈ ಕಾಯಿಲೆಯ ಒಳಾರ್ಥದ ಬಗ್ಗೆ ಸಾಧಾರಣವಾಗಿ ತಿಳಿದಿರುವುದಿಲ್ಲ. ಈ ರೋಗವನ್ನು ಗುರುತಿಸುವಲ್ಲಿ ಸ್ವಲ್ಪ ಎಡವಿದರೂ, ಇದು ಗಂಭೀರ ಪರಿಣಾಮವನ್ನು ಬೀರುತ್ತದೆ. ಈ ರೋಗವು ನೋಡಲು ಸಾಮಾನ್ಯವಾಗಿದ್ದರೂ, ದೇಹದೊಳಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಈ ರೋಗದದ ಚಿನ್ಹೆಗಳನ್ನು ವೇಗವನ್ನು ಗುರುತಿಸುವುದರಿಂದ ಬೇಗನೆ ಗುಣಮುಖರಾಗಬಹುದು. ಹಾಗಿದ್ದರೆ ಆ ಚಿನ್ಹೆಗಳು ಯಾವುದು ನೋಡೋಣ ಬನ್ನಿ..
ನಿಮ್ಮ ಕುತ್ತಿಗೆ, ಕಂಕುಳು, ಸೊಂಟ ಅಥವಾ ಒಳ ತೊಡೆಯ ಸುತ್ತ ಕಪ್ಪಾಗಿದ್ದರೆ, ಇದು ಅಕಾಂತೋಸಿಸ್ ನಿಗ್ರಿಕನ್ಸ್ ಸಂಕೇತ ಎಂದು ಗುರುತಿಸಲಾಗಿದೆ. ಈ ಸ್ಥಿತಿಯು ಹೆಚ್ಚಾಗಿ ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ. ದೇಹವು ಇನ್ಸುಲಿನ್ ಉತ್ಪಾದಿಸುತ್ತದೆ ಆದರೆ, ಅದನ್ನು ಪರಿಣಾಮಕಾರಿಯಾಗಿ ಬಳಸುವುದಿಲ್ಲ. ಸಂಶೋಧನೆಯೊಂದರ ಪ್ರಕಾರ, ಇದು ದೇಹಕ್ಕೆ ಮಂಜಿನ ಎಚ್ಚರಿಕೆಯ ಸಂಕೇತವಾಗಿದೆ. ಹಾಗಾಗಿ ಇದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗುವುದು ಉತ್ತಮ.
ಹೆಚ್ಚಾಗಿ, ಜನರು ಅತಿಯಾಗಿ ತಿನ್ನುತ್ತಿದ್ದರೂ, ತೂಕದಲ್ಲಿ ನಷ್ಟವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ದೇಹವು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗದಿದ್ದಾಗ, ಸ್ನಾಯುಗಳು ಮತ್ತು ಕೊಬ್ಬನ್ನು ಒಡೆಯುವ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ತ್ವರಿತ ಪ್ರತಿಕ್ರಿಯೆಯಿಂದ ದೇಹದಲ್ಲಿರುವ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾದಾಗ ಅದು ಕಣ್ಣಿನಲ್ಲಿರುವ ಮಸೂರದ ಆಕಾರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ದೃಷ್ಟಿ ಕಳಪೆಯಾಗಿ ಬದಲಾಗುತ್ತದೆ. ಈ ರೀತಿಯಾಗಿ ಮತ್ತೆ ಮತ್ತೆ ಸಂಭವಿಸಿದರೆ, ಇದು ರೆಟಿನೋಪತಿಯ ಆರಂಭಿಸುತ್ತದೆ. ಇದಕ್ಕೆ ದೀರ್ಘಕಾಲದವರೆಗೆ ಚಿಕಿತ್ಸೆ ನೀಡದಿದ್ದರೆ, ನಿಮ್ಮ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ.
ಮಧುಮೇಹವು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಎರಪ್ಟಿವ್ ಕ್ಸಾಂಥೊಮಾಟೋಸಿಸ್ ಎಂಬ ಚರ್ಮದ ಸ್ಥಿತಿಗೆ ಕಾರಣವಾಗಬಹುದು. ಇದರಿಂದ ದೇಹದ ಭಾಗಗಳಾದ ಮೊಣಕಾಲುಗಳು, ಮೊಣಕೈಗಳು, ತೊಡೆಗಳು ಮತ್ತು ಪೃಷ್ಟದ ಮೇಲೆ ಉಬ್ಬುಗಳು ಆಗಲು ಪ್ರಾರಂಭಿಸುತ್ತವೆ. ಇವು ತುರಿಕೆ ಮತ್ತು ನೋವನ್ನು ಉಂಟು ಮಾಡಬಹುದು.
ದೇಹವು ಮಧುಮೇಹ ಹೊಂದಿದಾಗ ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಗ್ಲೂಕೋಸ್ ಶಕ್ತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ನಿರಂತರ ಆಯಾಸ, ದೌರ್ಬಲ್ಯ, ಏಕಾಗ್ರತೆಯ ಕೊರತೆ ಮತ್ತು ಹೆಚ್ಚಿದ ಕಿರಿಕಿರಿ ಉಂಟಾಗುತ್ತದೆ. ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ, ಗ್ಲೂಕೋಸ್ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹಕ್ಕೆ ಮಾತ್ರವಲ್ಲದೇ, ಮನಸ್ಸೂ ಕೂಡ ಏಕಾಗ್ರತೆಯನ್ನು ಕಳೆದುಕೊಳ್ಳುತ್ತದೆ.
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.