

ಹೆಬ್ರಿ: ಜಾತಿಗಳ ಸಾವಾಜಿಕ, ಆರ್ಥಿಕ ಅಭಿವೃದ್ಧಿ, ಸಂವಿಧಾನದ ನಿಜ ಆಶಯವಾದ ಸಮೂಹ ಸಮೃದ್ಧಿಯ ಗುರಿಯೆಡೆಗೆ ಕರ್ನಾಟಕವನ್ನು ಮುನ್ನಡೆಸಿದ ಧೀಮಂತ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರು ದಮನಿತರ ಪಾಲಿಗೆ ಚಿರ ನೆನಪು ಎಂದು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ.ಎಚ್ ಹೇಳಿದರು.
ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಿವಂಗತ ದೇವರಾಜು ಅರಸು ಅವರ 110ನೇ ಜನ್ಮ ದಿನಾಚರಣೆಯಲ್ಲಿ ಅರಸು ಭಾವಚಿತ್ರಕ್ಕೆ ಗೌರವ ಸಲ್ಲಿಸಿ ವಾತನಾಡಿದರು.
ಸದ್ಭಾವನಾ ದಿನದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಂದೀಶ್ ಕುವಾರ್ ಕೆ.ಸಿ. ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ಸವಾಜಶಾಸ ವಿಭಾಗದ ಮೀನಾಕ್ಷಿ ನಾಯ್ಕ ಉಪಸ್ಥಿತರಿದ್ದರು.