

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಂದಗನ್ನಡ ಅಧ್ಯಯನ ಪೀಠ ಆರಂಭಿಸಲು ಅನುಮತಿ ನೀಡಿ ಸರ್ಕಾರ 1.5 ಕೋಟಿ ರೂ. ಅನುದಾನ ಮಂಜೂರು ವಾಡಿದೆ. 50 ಲಕ್ಷ ರೂ. ತಕ್ಷಣ ಬಿಡುಗಡೆ ವಾಡಿ ಕೆಲಸ ಪ್ರಾರಂಭಿಸಲಾಗಿದೆ. ಕುಂದಾಪ್ರ ಕನ್ನಡ ಬೆಳೆಸಬೇಕಾದರೆ ಎಲ್ಲ ಮನೆಗಳಲ್ಲೂ ವಾತನಾಡಬೇಕು. ಯಾವುದೇ ಹಿಂಜರಿಕೆ ನಮ್ಮ ಭಾಷೆ ಮಾತನಾಡಬೇಕು. ಹಳ್ಳಿಗಳಲ್ಲಿ ಹಿರಿಯರು ಹೆಚ್ಚಾಗಿ ಕುಂದಾಪ್ರ ಕನ್ನಡ ಬಳಸುತ್ತಿದ್ದು, ಅಲ್ಲಿ ಬಳಸುವ ಕುಂದಾಪ್ರ ಕನ್ನಡ ಶಬ್ದಗಳ ಬಗ್ಗೆ ಅಧ್ಯಯನ ವಾಡಿ ವರದಿ ನೀಡಲು ಮುಂದಾಗಿದ್ದೇವೆ. ಕುಂದಗನ್ನಡ ಶಬ್ದಗಳ ಬಗ್ಗೆ ವಾಹಿತಿ ನೀಡಿದರೆ ಅಧ್ಯಯನ ಪೀಠ ವಾಡಿದ್ದು ಸಾರ್ಥಕವಾಗುತ್ತದೆ ಎಂದು ಮಂಗಳೂರು ವಿವಿ ಕುಂದಗನ್ನಡ ಅಧ್ಯಯನ ಪೀಠದ ಸದಸ್ಯ, ವಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಬಸ್ರೂರು ಶ್ರೀ ಶಾರದಾ ಕಾಲೇಜು ಆಶ್ರಯದಲ್ಲಿ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಕುಂದಗನ್ನಡ ಅಧ್ಯಯನ ಪೀಠ ಸಹಯೋಗದಲ್ಲಿ ವಿಶ್ವ ಕುಂದಾಪ್ರ ದಿನಾಚರಣೆ ಅಂಗವಾಗಿ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳ ಅಂತರ್ ಕಾಲೇಜು ಕುಂದಗನ್ನಡ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ಚೆನ್ನಿಮಣಿ-2025 ಬುಧವಾರ ಉದ್ಘಾಟಿಸಿ ವಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ವಾತನಾಡಿದರು. ಶ್ರೀ ಶಾರದಾ ಕಾಲೇಜು ವಿಶ್ವಸ್ಥ ಮಂಡಳಿ ಸದಸ್ಯೆ ಅನುಪವಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಹಾರ್ದಳ್ಳಿಮಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಡಾ.ಗಿರೀಶ ಎಂ. ವಾಹಿತಿ ನೀಡಿದರು.
ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಮಮತಾ ಸಹಕರಿಸಿದರು. ಪ್ರಾಧ್ಯಾಪಕರಾದ ಆಶಾ, ರಾವೇಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಹಳ್ಳಿ ಭಾಷೆ ಎಂಬ ದೃಷ್ಟಿಯಿಂದ ಕುಂದಾಪ್ರ ಕನ್ನಡವನ್ನು ದೈನಂದಿನ ನೆಲೆಯಲ್ಲಿ ಬಳಸುವುದು ಕಡಿಮೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಕುಂದಾಪ್ರ ಕನ್ನಡದ ಬಗ್ಗೆ ಆಸಕ್ತಿ ಬಂದಿದೆ. ಯಾವುದೇ ಭಾಷೆಯ ಹಿನ್ನಲೆ ಅರ್ಥವಾಡಿಕೊಂಡರೆ ಅದರ ಮೂಲ ಏನು ಎಂಬುದು ತಿಳಿಯುತ್ತದೆ. ಇತಿಹಾಸ ಕೆದಕುವ, ಹುಡುಕುವ ಕೆಲಸವನ್ನು ಕುಂದಗನ್ನಡ ಅಧ್ಯಯನ ಪೀಠ ವಾಡುತ್ತಿದೆ. ಯಾವಾಗ ಒಂದು ಭಾಷೆಗೆ ವಾನ್ಯತೆ ಬರುತ್ತದೆಯೋ ಆಗ ಆ ಭಾಷೆಯನ್ನು ನಿರ್ಭೀತಿಯಿಂದ ಬಳಸಲು ಪ್ರಾರಂಭಿಸುತ್ತೇವೆ. ಕುಂದಾಪ್ರ ಕನ್ನಡ ಬರೆಯಿರಿ, ಕುಂದಾಪ್ರ ಕನ್ನಡ ವಾತನಾಡಬೇಕು. -ರಾಜು ಮೊಗವೀರ ಮಂಗಳೂರು ವಿವಿ ಕುಲಸಚಿವ https://www.vijayavani.net/taluk-committee-annual-general-meeting https://www.vijayavani.net/tribute-to-veteran-photographers