ಇನ್ನೂ 3 ದಿನ ಮಾಧ್ಯಮದವರ ಜತೆ ಮಾತಾಡಲ್ಲ ಎಂದ ಈಶ್ವರಪ್ಪ

Eshwarappa K. S (6)
Published on

ಶಿವಮೊಗ್ಗ: ಇನ್ನೂ ಮೂರು ದಿನ ನಿಮ್ಮೊಂದಿಗೆ (ಮಾಧ್ಯಮ) ಮಾತನಾಡದಂತೆ ತೀರ್ಮಾನಿಸಿದ್ದೇನೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ.

ಕುವೆಂಪು ರಂಗಮಂದಿರದಲ್ಲಿ ಗುರುವಾರ ಅಂಬೇಡ್ಕರ್​ ಜಯಂತಿಯಲ್ಲಿ ಪಾಲ್ಗೊಂಡು ಹೊರಬಂದ ಬಳಿಕ ಪತ್ರಕರ್ತರು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ನಗುಮೊಗದಿಂದಲೇ ಮಾಧ್ಯಮದವರ ಬಳಿ ಈಶ್ವರಪ್ಪ ಬಂದರು. ಆದರೆ ನಿಮ್ಮೊಂದಿಗೆ ಇನ್ನೂ ಮೂರು ದಿನ ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿ ಹೊರಟರು. ಗುಂಡಪ್ಪ ಶೆಡ್​ನಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದ ಪತ್ರಕರ್ತರಿಗೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net