ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ

1265832
Published on

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್​ರ ಸಾವಿನ ಹಿಂದಿನ ಕಿಂಗ್​ಪಿನ್​ ಡಿ.ಕೆ. ಶಿವಕುಮಾರ್ ಅವರೇ ಯಾಕೆ ಆಗಿರಬಾರದು? ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶಂಕಿಸಿದ್ದಾರೆ.

ಡಿಕೆಶಿ ಬಹಳಷ್ಟು ಕೃತ್ಯಗಳನ್ನು ಮಾಡ್ತಾ ಇದ್ದಾರೆ. ಈಶ್ವರಪ್ಪರ ವಿರುದ್ಧ ಸಂತೋಷ್​ ಕೈಯಲ್ಲೂ ಸ್ಟೇಟ್​ಮೆಂಟ್ ಕೊಡ್ಸಿರಬಹುದು. ರಮೇಶ್​ ಜಾರಕಿಹೊಳಿ ಅವರ ಕೇಸ್​ ಇದಕ್ಕೆ ಸಾಕ್ಷಿ. ಜಾರಕಿಹೊಳಿಯನ್ನು ಮಟ್ಟ ಹಾಕಲು ಯಾವುದೋ ಹೆಣ್ಣು ಮಗುವನ್ನು ಬಳಸಿಕೊಂಡು ರಾಜಿನಾಮೆ ಕೊಡಿಸಿ ಕುತಂತ್ರ ಮಾಡಿದರು. ಗುತ್ತಿಗೆದಾರ ಸಂತೋಷ್​ ಸತ್ತಿರುವುದು ಉಡುಪಿಯಲ್ಲಿ, ಹಿಜಾಬ್ ವಿವಾದ ಶುರುವಾಗಿದ್ದೂ ಉಡುಪಿಯಲ್ಲಿ. ಇದರ ಹಿಂದೆ ಕಾಂಗ್ರೆಸ್ ಪಕ್ಷವಿದೆ. ಪೊಲೀಸರಿಗೆ ಶುದ್ಧ ತನಿಖೆ ಮಾಡಲು ಸರ್ಕಾರ ಬಿಟ್ಟರೆ ಒಂದೇ ದಿನದಲ್ಲಿ ಎಲ್ಲವೂ ಬಯಲಾಗುತ್ತದೆ ಎಂದು ಋಷಿಕುಮಾರ ಸ್ವಾಮಿ ಸವಾಲು ಹಾಕಿದರು.

ಬೆಳಗಾವಿ ರೂರಲ್ ಏರಿಯಾದಲ್ಲಿ 4 ಕೋಟಿ ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ ಅಂತಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಗೊತ್ತಾಗಲ್ಲ. ಯಾವ ಆಧಾರದ ಮೇಲೆ ಕೆಲ್ಸ ನಡೆದಿದೆ ಎಂದು ಈ ಬಗ್ಗೆ ಡಿ.ಕೆ. ಶಿವಕುಮಾರ್ ಯಾಕೆ ಅವರನ್ನು ತನಿಖೆ ಮಾಡ್ತಿಲ್ಲ. ಯಾಕೆ ಕುಕ್ಕರ್ ಜೋರಾಗಿ ಕೂಗುತ್ತೆ ಅಂತ ಸುಮ್ಮನಿದ್ದಾರಾ? ಮಾನ್ಯ ಸಿದ್ದರಾಮಯ್ಯ ಅವರು ನಾಟಕದ ಕಂಪನಿಯ ಮ್ಯಾನೇಜರ್. ಕಾಂಗ್ರೆಸ್​ನವರು ಮಾಡಿರುವ ಕೊಲೆಯನ್ನು ಮುಚ್ಚಾಕೋ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಋಷಿಕುಮಾರ ಸ್ವಾಮಿ, ಈಶ್ವರಪ್ಪರ ಜೊತೆ ನಾವಿದ್ದೇವೆ. ಅದ್ಹೇಗೆ ನಿಮ್ಮ ಕುಕ್ಕರ್ ಕೈಯಲ್ಲಿ ಕೂಗಿಸ್ತೀರಾ? ಡಿ.ಕೆ. ಶಿವಕುಮಾರ್ ಕೈಯಲ್ಲಿ ಒಗ್ಗರಣೆ ಹಾಕಿಸ್ತೀರಾ? ಸಿದ್ದರಾಮಯ್ಯ ಅವ್ರ ಕೈಯಲ್ಲಿ ಒಲೆ ಹಚಿಸ್ತೀರಾ? ನಾವೂ ನೋಡ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net