

ಮುಂಬೈ: ಸಾರ್ವಜನಿಕರೇ ಎಚ್ಚರ! ಮಾಸ್ಕ್ ಖರೀದಿಸುವಾಗ ಹಲವು ಬಾರಿ ಯೋಚನೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಏಕೆಂದರೆ ಬಳಸಿ ಬಿಸಾಡಿದ ಮಾಸ್ಕ್ಗಳನ್ನು ಸಂಗ್ರಹಿಸಿ ಅವುಗಳನ್ನು ತೊಳೆದು ಇಸ್ತ್ರಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ.
ಮುಂಬೈನ ವಿರಾರ್ ಪ್ರದೇಶದ ಗೋದಾಮು ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಬಳಸಿದ ಮಾಸ್ಕ್ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ವಿರಾರ್ ಪೂರ್ವ ಪ್ರದೇಶದಲ್ಲಿ ಮೂವರು ಬಳಸಿದ ಮಾಸ್ಕ್ಗಳನ್ನು ಪೌರ ಕಾರ್ಮಿಕರಿಂದ ಸಂಗ್ರಹಿಸಿ ಅವುಗಳನ್ನು ವಾಷಿಂಗ್ ಮಿಷಿನ್ನಲ್ಲಿ ಹಾಕಿ ಒಗೆದು ನಂತರ ಇಸ್ತಿ ಮಾಡಿ ಪ್ಯಾಕ್ ಮಾಡುತ್ತಿದ್ದರು. ಪ್ಯಾಕ್ ಮೇಲೆ ಎನ್-95 ಮಾಸ್ಕ್ ಎಂಬ ಲೇಬಲ್ ಅಂಟಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಿದ್ದರು.
ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ಗೋದಾಮು ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು.
ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ಧರಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಾಸ್ಕ್ಗೆ ಬೇಡಿಕೆ ವ್ಯಕ್ತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬಳಸಿದ ಮಾಸ್ಕ್ಗಳನ್ನು ತೊಳೆದು ಮಾರಾಟ ಮಾಡಲು ಮುಂದಾಗಿದ್ದಾರೆ. (ಏಜೆನ್ಸೀಸ್)