ಮೇ 3ನ್ನೇ ಮೋದಿ ಆಯ್ಕೆ ಮಾಡಿದ್ದೇಕೆ ಗೊತ್ತೆ?

smart lockdown
Published on

ನವದೆಹಲಿ: ಇಂದು ಮುಗಿಯಬೇಕಿದ್ದ ಲಾಕ್‌ಡೌನ್‌ ಅವಧಿಯನ್ನು ವಿಸ್ತರಣೆ ಮಾಡುವ ವಿಷಯ ಬಹುತೇಕ ಎಲ್ಲರಿಗೂ ತಿಳಿದೇ ಇತ್ತು. ಆದರೆ ದಿನಾಂಕ ಮಾತ್ರ ಯಾವುದು ಎನ್ನುವ ಬಗ್ಗೆ ಸಂದೇಹವಿತ್ತು. ಈ ಸಂದೇಹವನ್ನು ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾರಿಸಿ, ಲಾಕ್‌ಡೌನ್‌ ಅವಧಿಯನ್ನು ಏಪ್ರಿಲ್‌ 30ರವರೆಗೆ ಮುಂದೂಡಿದ್ದರು. ಕರ್ನಾಟಕ ಮಾತ್ರವಲ್ಲದೇ ಬಹುತೇಕ ರಾಜ್ಯಗಳೂ ಏ.30 ಅನ್ನೇ ಆಯ್ಕೆ ಮಾಡಿಕೊಂಡು, ಅಲ್ಲಿಯವರೆಗೂ ಅವಧಿಯನ್ನು ವಿಸ್ತರಿಸಿದ್ದರು.

ಇಂದು ಪ್ರಧಾನಿ ಮೋದಿ ಅವರು ಈ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಇತ್ತು. ಏಕೆಂದರೆ ಪ್ರಧಾನಿಯವರು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಈ ಹಿಂದೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ್ದ ವೀಡಿಯೋ ಕಾನ್ಫರೆನ್ಸ್‌ನಲ್ಲಿಯೂ ದಿನಾಂಕ ಏಪ್ರಿಲ್‌ 30ವರೆಗೆ ಲಾಕ್‌ಡೌನ್‌ ಮುಂದುವರಿಸುವ ಬಗ್ಗೆಯೇ ಚರ್ಚೆಯಾಗಿತ್ತು.

ಆದರೆ ಇಂದು ಬೆಳಗ್ಗೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಎಲ್ಲರ ನಿರೀಕ್ಷೆ ಹುಸಿಯಾಯಿತು. ಲಾಕ್‌ಡೌನ್‌ ಅವಧಿ ಇನ್ನೂ ಮೂರು ದಿನ ಮುಂದಕ್ಕೆ ಹೋಗಿ, ಮೇ 3ರವರೆಗೆ ವಿಸ್ತರಿಸಿದರು.

ಹಾಗಿದ್ದರೆ ಈ ಮೂರು ದಿನ ಹೆಚ್ಚು ಮಾಡಿದ್ದೇಕೇ ಎನ್ನುವ ಪ್ರಶ್ನೆ ಎಲ್ಲರನ್ನೂ ಸಹಜವಾಗಿ ಕಾಡುತ್ತಿದೆ.
ಅದಕ್ಕೆ ಉತ್ತರ ತುಂಬಾ ಸಿಂಪಲ್‌. ಮೇ 1 ಕಾರ್ಮಿಕರ ದಿನ. ಅಂದು ಸಹಜವಾಗಿಯೇ ಸರ್ಕಾರಿ ರಜೆ. ಮೇ 2 ಮತ್ತು 3 ಶನಿವಾರ ಮತ್ತು ಭಾನುವಾರ ಅಂದರೆ ವೀಕೆಂಡ್‌. ಈ ಎಲ್ಲಾ ದಿನಗಳಂದು ಏಕಾಏಕಿ ರಶ್‌ ಆಗುವ ಸಾಧ್ಯತೆ ಸಹಜ. ಆದ್ದರಿಂದ ಇಂಥದ್ದೊಂದು ಅನಾಹುತ ಆಗುವುದನ್ನು ತಡೆಯುವ ಸಲುವಾಗಿ ಮೂರು ದಿನಗಳವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net