ಛಾಯಾಗ್ರಾಹಕರಿಂದ ಪರಿಸರ ಸ್ವಚ್ಛತೆ

BDK
Published on

ಬದಿಯಡ್ಕ: ಆಲ್ ಕೇರಳ ಪೋಟೋಗ್ರಾಫರ್ಸ್‌ ಅಸೋಸಿಯೇಶನ್ ಬದಿಯಡ್ಕ ಘಟಕದ ನೇತೃತ್ವದಲ್ಲಿ ಬದಿಯಡ್ಕ ಬಸ್ ತಂಗುದಾಣ ಹಾಗೂ ಪರಿಸರ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.

ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಬದಿಯಡ್ಕ ಘಟಕ ಅಧ್ಯಕ್ಷ ಬಾಲಕೃಷ್ಣ ನೀರ್ಚಾಲು, ಕಾರ್ಯದರ್ಶಿ ನಾರಾಯಣ ಓಡಂಗಲ್ಲು ನೇತೃತ್ವ ವಹಿಸಿದ್ದರು.

ಹಿರಿಯ ಛಾಯಾಗ್ರಾಹಕ ಬಾಲಸುಬ್ರಹ್ಮಣ್ಯ ಬೊಳುಂಬು, ಬದಿಯಡ್ಕ ಘಟಕ ನಿಕಟಪೂರ್ವ ಅಧ್ಯಕ್ಷ ಶ್ಯಾಮಪ್ರಸಾದ ಸರಳಿ, ಇಂಧುಶೇಖರ ವಾಂತಿಚ್ಚಾಲು, ಉದಯಕುಮಾರ್ ಮೈಕುರಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಶುಚಿತ್ವ ಕಾರ್ಯಕ್ಕೆ ಪತ್ರಿಕಾ ವಿತರಕ ಬಾಲಕೃಷ್ಣ ಪೊಯ್ಯಕ್ಕಂಡ ಜತೆಗೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net