ಸುಳ್ಯ: ಗಾಂಧಿ ಚಿಂತನ ವೇದಿಕೆಯ ವತಿಯಿಂದ ನಗರ ಪಂಚಾಯಿತಿ, ವಿವಿಧ ಶಾಲಾ ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ಗಾಂಧಿ ನಡಿಗೆ ಕಾರ್ಯಕ್ರಮ ಬುಧವಾರ ಸುಳ್ಯ ನಗರದಲ್ಲಿ ನಡೆಯಿತು.
ಲಾಲ್ ಬಹಾದೂರ್ ಶಾಸ್ತ್ರಿ ವೃತ್ತದಿಂದ ಆರಂಭಗೊಂಡ ಗಾಂಧಿ ನಡಿಗೆ ಗಾಂಧಿನಗರ ಗಾಂಧಿ ಪಾರ್ಕ್ ಬಳಿಯಲ್ಲಿ ಸಮಾಪನಗೊಂಡಿತು.
ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ನೇತೃತ್ವದಲ್ಲಿ ನಡೆದ ಗಾಂಧಿ ನಡಿಗೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾವಿನಯಚಂದ್ರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ಡಾ.ಸುಂದರ ಕೇನಾಜೆ, ಶಂಕರ ಪೆರಾಜೆ, ದಿನೇಶ್ ಮಡಪ್ಪಾಡಿ, ನ.ಪಂ.ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ, ಪಿ.ಸಿ. ಜಯರಾಮ್, ಪಿ.ಎಸ್.ಗಂಗಾಧರ್, ಸುರೇಶ್ ಅಮೈ, ಗೀತಾ ಕೋಲ್ಟಾರ್, ದೊಡ್ಡಣ್ಣ ಬರೆಮೇಲು, ವೀರಪ್ಪ ಗೌಡ ಕಲ್ಕಲ್, ಚಂದ್ರಾ ಕೋಲ್ಟಾರ್, ಡಾ.ಎನ್.ಎ.ಜ್ಞಾನೇಶ್ ಮೊದಲಾದವರು ಹಾಜರಿದ್ದರು.