ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪೂರ

ಅಮರೇಗೌಡ ಮಲ್ಲಾಪೂರ
ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಮರೇಗೌಡ ಮಲ್ಲಾಪುರ ಅವರನ್ನು ವಿನಾಯಕ ಗ್ರಾಮೀಣ ಅಭಿವೃದ್ಧಿ ಯುವಕ ಸಂಘದಿಂದ ಸನ್ಮಾನಿಸಲಾಯಿತು
Published on

ಸಿಂಧನೂರು: ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇದರಿಂದ ರಾಜ್ಯ ಹಸಿರುಮಯವಾಗಿ ಉತ್ತಮ ಮಳೆಯಾಗಲು ಅನುಕೂಲವಾಗುತ್ತದೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಹೇಳಿದರು.


ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ 2023ನೇ ಸಾಲಿನ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ವತಿಯಿಂದ ನೀಡಲಾದ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಗ್ರಾಮದ ವಿನಾಯಕ ಗ್ರಾಮೀಣ ಅಭಿವೃದ್ಧಿ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಬುಧವಾರ ಮಾತನಾಡಿದರು.

ಈ ಪ್ರೋತ್ಸಾಹದಿಂದ ನನಗೆ ಇನ್ನಷ್ಟು ಪರಿಸರ ಸೇವೆ ಮಾಡಲು ಉತ್ಸಾಹವಾಗುತ್ತಿದೆ

ಪ್ರತಿಯೊಬ್ಬ ಪರಿಸರ ಪ್ರೇಮಿಗಳಿಗೆ ಈ ಪ್ರಶಸ್ತಿ ಸಲ್ಲಬೇಕಾಗಿದ್ದು, ನಿಮ್ಮ ಈ ಪ್ರೋತ್ಸಾಹದಿಂದ ನನಗೆ ಇನ್ನಷ್ಟು ಪರಿಸರ ಸೇವೆ ಮಾಡಲು ಉತ್ಸಾಹವಾಗುತ್ತಿದೆ. ಪ್ರತಿಯೊಬ್ಬರು ತಮ್ಮ ಕೆಲಸ ಕಾರ್ಯಗಳ ಜತೆಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಆನಂದ, ಸದಸ್ಯರಾದ ವೆಂಕೋಬ ಜೂಲದ್, ಮಂಜುನಾಥ, ದೇವರಡ್ಡಿ ಕೆಸರಟ್ಟಿ, ಲಾಲುಸಾಬ, ಸಿದ್ದು ಹೋಟೆಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net