

ಬರ್ಮಿಂಗ್‌ಹ್ಯಾಂ: ಪದಾರ್ಪಣೆ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಎಡಗೈ ಆರಂಭಿಕ ಡೆವೊನ್ ಕಾನ್‌ವೇ (80 ರನ್, 143 ಎಸೆತ, 12 ಬೌಂಡರಿ) ಭರ್ಜರಿ ಫಾರ್ಮ್ ಮುಂದುವರಿಸುವುದರೊಂದಿಗೆ ನ್ಯೂಜಿಲೆಂಡ್ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಉತ್ತರ ನೀಡಿದೆ.
ಶುಕ್ರವಾರ 7 ವಿಕೆಟ್‌ಗೆ 258 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್ 303 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಕಿವೀಸ್ ಚಹಾ ವಿರಾಮದ ಬಳಿಕ 2 ವಿಕೆಟ್‌ಗೆ 140 ರನ್ ಗಳಿಸಿದ್ದು, 163 ರನ್ ಹಿನ್ನಡೆಯಲ್ಲಿದೆ. ಕಾನ್‌ವೇ ಮತ್ತು ವಿಲ್ ಯಂಗ್ (44*) 2ನೇ ವಿಕೆಟ್‌ಗೆ 122 ರನ್ ಸೇರಿಸಿದರು. ಯಂಗ್ ಜತೆಗೆ ರಾಸ್ ಟೇಲರ್ (3*) ಕ್ರೀಸ್‌ನಲ್ಲಿದ್ದಾರೆ.
ಆಡಿದ ಮೊದಲ 3 ಇನಿಂಗ್ಸ್‌ಗಳಲ್ಲೇ 303 ರನ್ (200, 23, 80) ಪೇರಿಸಿದ ಡೆವೊನ್ ಕಾನ್‌ವೇ, ವೃತ್ತಿಜೀವನದ ಮೊದಲ 3 ಟೆಸ್ಟ್ ಇನಿಂಗ್ಸ್‌ಗಳಲ್ಲಿ 300 ಪ್ಲಸ್ ರನ್ ಗಳಿಸಿದ ವಿಶ್ವದ 11ನೇ ಆಟಗಾರ ಎನಿಸಿದರು. ಟಿಪ್ ಪೋಸ್ಟರ್ 355 ರನ್ ಗಳಿಸಿರುವುದು ಗರಿಷ್ಠವಾಗಿದೆ. ಕರುಣ್ ನಾಯರ್ (320), ಸೌರವ್ ಗಂಗೂಲಿ (315) ಮತ್ತು ರೋಹಿತ್ ಶರ್ಮ (302) ಈ ಪಟ್ಟಿಯಲ್ಲಿರುವ ಮೂವರು ಭಾರತೀಯರಾಗಿದ್ದಾರೆ.
ಇಂಗ್ಲೆಂಡ್: 101 ಓವರ್‌ಗಳಲ್ಲಿ 303 (ಲಾರೆನ್ಸ್ 81*, ವುಡ್ 41, ಬೌಲ್ಟ್ 85ಕ್ಕೆ 4, ಹೆನ್ರಿ 78ಕ್ಕೆ 3, ಅಜಾಜ್ 34ಕ್ಕೆ 2). ನ್ಯೂಜಿಲೆಂಡ್: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 140 (ಲಾಥಮ್ 6, ಕಾನ್‌ವೇ 80, ಯಂಗ್ 44*, ರಾಸ್ ಟೇಲರ್ 3*, ಬ್ರಾಡ್ 20ಕ್ಕೆ 2).