More

    ಶ್ರೀಲಂಕಾ ಪ್ರವಾಸಕ್ಕೆ ಧವನ್ ನಾಯಕ, ಕರ್ನಾಟಕದ ಮೂವರಿಗೆ ಸ್ಥಾನ

    ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಪ್ರವಾಸಕ್ಕೆ ಎಡಗೈ ಆರಂಭಿಕ ಶಿಖರ್ ಧವನ್ ಸಾರಥ್ಯದ ಭಾರತ ತಂಡವನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಮೂವರು ಕನ್ನಡಿಗರಾದ ಮನೀಷ್ ಪಾಂಡೆ, ದೇವದತ್ ಪಡಿಕಲ್ ಮತ್ತು ಕೆ. ಗೌತಮ್ 20 ಆಟಗಾರರ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

    ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಭಾರತ ತಂಡದ ಪ್ರಮುಖ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವ ನಡುವೆ ಲಂಕಾ ಪ್ರವಾಸಕ್ಕೆ ನಿರೀಕ್ಷೆಯಂತೆಯೇ 2ನೇ ಸ್ತರದ ತಂಡವನ್ನು ಆರಿಸಲಾಗಿದ್ದು, ಐಪಿಎಲ್‌ನಲ್ಲಿ ಮಿಂಚಿರುವ ಬಹುತೇಕ ಯುವ ಆಟಗಾರರು ಸ್ಥಾನ ಪಡೆದಿದ್ದಾರೆ. ಪಡಿಕಲ್ ಮತ್ತು ಕೆ. ಗೌತಮ್ ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜೂನ್ 28ರಂದು ಪ್ರವಾಸಕ್ಕೆ ತೆರಳಲಿರುವ ಭಾರತ ತಂಡ, ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ತಲಾ 3 ಏಕದಿನ (ಜುಲೈ 13, 16, 18) ಮತ್ತು ಟಿ20 (ಜುಲೈ 21, 23, 25) ಪಂದ್ಯಗಳನ್ನು ಆಡಲಿದೆ.

    ಇದನ್ನೂ ಓದಿ: ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್​ ವಿತರಣೆ, ಆದರೆ ಬಳಸುವಂತಿಲ್ಲ!

    ಎನ್‌ಸಿಎ ಮುಖ್ಯಸ್ಥರಾಗಿರುವ ದಿಗ್ಗಜ ರಾಹುಲ್ ದ್ರಾವಿಡ್ ತಂಡಕ್ಕೆ ಮುಖ್ಯ ಕೋಚ್ ಆಗಿರುತ್ತಾರೆ ಎಂದು ಈ ಮುನ್ನ ವರದಿಯಾಗಿದ್ದರೂ, ತಂಡ ಪ್ರಕಟಣೆಯ ವೇಳೆ ತರಬೇತಿ ಬಳಗದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.

    ಭಾರತ ತಂಡ: ಶಿಖರ್ ಧವನ್ (ನಾಯಕ), ಪೃಥ್ವಿ ಷಾ, ದೇವದತ್ ಪಡಿಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯಜುವೇಂದ್ರ ಚಾಹಲ್, ರಾಹುಲ್ ಚಹರ್, ಕೆ. ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯ.
    ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷದೀಪ್ ಸಿಂಗ್, ಸಾಯಿ ಕಿಶೋರ್, ಸಿಮ್ರಾನ್‌ಜೀತ್ ಸಿಂಗ್.

    ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟ

    ಐಪಿಎಲ್‌ಗೆ ಸಿಪಿಎಲ್ ಅಡ್ಡಗಾಲು ಭೀತಿ, ವಿಂಡೀಸ್ ಕ್ರಿಕೆಟಿಗರ ಆಗಮನ ವಿಳಂಬ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts