ಐಪಿಎಲ್ 2024ರ ಆವೃತ್ತಿಯಿಂದ ಅಧಿಕೃತವಾಗಿ ಹೊರಬಿದ್ದ ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ಇದೀಗ ಅನೇಕರು ಕಿಡಿಕಾರಿದ್ದು, ಐದು ಬಾರಿ ಚಾಂಪಿಯನ್ಸ್ ಪಟ್ಟ ಪಡೆದಿದ್ದ ಒಂದು ತಂಡ, ಇಂತಹ ಹೀನಾಯ ಸೋಲನ್ನು ಕಾಣುವ ಮೂಲಕ ಲೀಗ್ನಿಂದ ಹೊರಗುಳಿದಿರುವುದು ಬಹಳ ಅಚ್ಚರಿಯ ವಿಷಯ. ಇದಕ್ಕೆ ಯಾರು ಹೊಣೆ? ತಂಡದ ಆಟಗಾರರೋ? ಪ್ರಾಂಚೈಸಿಯೋ ಅಥವಾ ನೂತನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ : ಕಲಬುರಗಿ ಜಿಲ್ಲೆಯಲ್ಲಿ ಸಂಭ್ರಮ
ಒಂದೆಡೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ವಹಿಸಿಕೊಂಡ ನಂತರವೇ ಮುಂಬೈಗೆ ಈ ಗತಿ ಎದುರಾಗಿದ್ದು ಎಂದು ಒಂದಷ್ಟು ಜನರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರ ಇದೇ ರೋಹಿತ್ ಶರ್ಮಾ ಅವರ ಕಡೆಯ ಸೀಸನ್ ಎಂದು ವ್ಯಾಪಕವಾಗಿ ಟ್ರೋಲ್ ಮಾಡುತ್ತಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಹಿಟ್ ಮ್ಯಾನ್ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಇನ್ನು ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಸೀಂ ಅಕ್ರಂ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಪ್ರಕಾರ ಖಂಡಿತ ರೋಹಿತ್ ಮುಂದಿನ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವುದು ಡೌಟ್. ಎಂಐನಲ್ಲಿ ಆಡುವುದರ ಬದಲಿಗೆ ಎರಡು ಬಾರಿ ಚಾಂಪಿಯನ್ಸ್ ಆಗಿರುವ ಕೆಕೆಆರ್ ತಂಡಕ್ಕೆ ರೋಹಿತ್ ಆಡುವುದನ್ನು ನಾನು ನೋಡಲು ಬಯಸುತ್ತೇನೆ. ಗೌತಮ್ ಗಂಭೀರ್ ಮೆಂಟರ್ಶಿಪ್ನಡಿ ಶರ್ಮಾ ಇನ್ನೂ ಉತ್ತಮವಾಗಿ ಬ್ಯಾಟ್ ಮಾಡಲು ಸಹಾಯವಾಗಬಹುದು” ಎಂದು ಅಭಿಪ್ರಾಯಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪಾಸ್ ಆದ ವಿದ್ಯಾರ್ಥಿನಿ ಶಿರಚ್ಛೇಧ! ಹತ್ಯೆಗೈದ ಆರೋಪಿ ರುಂಡದ ಜತೆ ಪರಾರಿ
ಹಾರ್ದಿಕ್ಗೆ ತಪ್ಪಲಿಲ್ಲ ಛೀಮಾರಿ! ಅಂದೇ ಈ ನಿರ್ಧಾರದಲ್ಲಿ ಬದಲಾವಣೆ ತಂದಿದ್ರೆ ಇಂದು ಈ ಪರಿಸ್ಥಿತಿ ಬರ್ತಿರಲಿಲ್ಲ