ಕೋಟ: ಪ್ರತಿಭೆ ಪ್ರೋತ್ಸಾಹಿಸುವುದು ಮತ್ತು ವಿಶೇಷ ಚೇತನರಿಗೆ ಸಹಾಯಧನ ಪುಣ್ಯದ ಕಾರ್ಯ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹೇಳಿದರು.
ದಿ.ಮಂಜುನಾಥ ಅಕ್ಸಾಲರ ಪತ್ನಿ ದಿ.ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಆಯೋಜಿಸಿದ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ಕಾರ್ಯಕ್ರಮ ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ್ ಆಚಾರ್ ಪ್ರಸ್ತಾವನೆ ಸಲ್ಲಿಸಿದರು. ಪುಷ್ಪಲತಾ ನಾಗರಾಜ ನಾಯಿರಿ ಅಧ್ಯಕ್ಷತೆ ವಹಿಸಸಿದ್ದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ದೆ, ರೋಟರಿ ಕ್ಲಬ್ ಪಿಎಚ್‌ಎಫ್ ಮಮತಾ ಆರ್.ಶೆಟ್ಟಿ, ಗೀತಾನಂದ ಫೌಂಡೆಶನ್ ಪ್ರವರ್ತಕ ಆನಂದ ಸಿ.ಕುಂದರ್, ವಡ್ಡರ್ಸೆ ಗ್ರಾಪಂ ಲೋಕೇಶ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ, ಎ.ಜಿ. ಅಸೋಸಿಯೇಟ್ಸ್ ಉಡುಪಿ ಗೋಪಾಲ್ ಭಟ್, ಉದ್ಯಮಿ ಎಂ.ಸುಬ್ರಾಯ್ ಆಚಾರ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಚಂದ್ರ ಪೂಜಾರಿ, ಸದಸ್ಯರಾದ ಯೋಗಿಶ್ ಕುಮಾರ್, ಭರತ್ ಕುಮಾರ್ ಶೆಟ್ಟಿ, ನಿರಂಜನ್ ಭಟ್ ಎಂ. ಉಪಸ್ಥಿತರಿದ್ದರು. ನಾರಾಯಣ ಆಚಾರ್ ವಂದಿಸಿದರು. ಶಿಕ್ಷಕ ಸಂಜೀವ್ ಗುಂಡ್ಮಿ ನಿರೂಪಿಸಿದರು. ಶ್ರೀ ಭಗವತ್ ಭಜನಾ ಮಂದಿರ ಬಾಲ ಭಜಕರು ಕೋಟ-ಪಡುಕರೆ ಅವರಿಂದ ಭಜನಾ ನೃತ್ಯ ಜರುಗಿತು.
ಸಹಾಯಧನ ವಿತರಣೆ
ಚಿತ್ರ ಬಿಡಿಸುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 52 ಮಂದಿ ವಿಕಲಚೇತನರಿಗೆ ಸಹಾಯಧನ ವಿತರಿಸಲಾಯಿತು.