ಟಾಟಾ ಸಮೂಹದ ರತನ್ ಟಾಟಾ ನಿಧನಕ್ಕೆ ಮುಕೇಶ್ ಅಂಬಾನಿಯಿಂದ ಭಾವುಕ ಸಂದೇಶ / Mukesh Ambani Condolences

blank

ನವದೆಹಲಿ: ಉದ್ಯಮವೂ ಸೇರಿದಂತೆ ದಾನ- ದತ್ತಿ, ಮೌಲ್ಯಯುತ ಗುಣಗಳಿಗೆ ಭಾರತ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಹೆಸರಾಗಿದ್ದ ರತನ್ ಟಾಟಾ ( Ratan Tata ) ಅವರು ಬುಧವಾರದಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕೈಗಾರಿಕೋದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಮುಕೇಶ್ ಅಂಬಾನಿ ( Mukesh Ambani Condolences ) ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾವುಕವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಆ ಸಂದೇಶ ಈ ಕೆಳಕಂಡಂತಿದೆ.

ಟಾಟಾ ಸಮೂಹದ ರತನ್ ಟಾಟಾ ನಿಧನಕ್ಕೆ ಮುಕೇಶ್ ಅಂಬಾನಿಯಿಂದ ಭಾವುಕ ಸಂದೇಶ / Mukesh Ambani Condolences

“ಭಾರತ ಮತ್ತು ಭಾರತದ ಕಂಪನಿಗಳಿಗೆ ಇದು ಅತ್ಯಂತ ದುಃಖದ ದಿನವಾಗಿದೆ. ರತನ್ ಟಾಟಾ ( Ratan Tata )
ಅವರ ನಿಧನವು ಟಾಟಾ ಸಮೂಹಕ್ಕೆ ಮಾತ್ರವಲ್ಲ, ಪ್ರತಿ ಭಾರತೀಯನಿಗೂ ದೊಡ್ಡ ನಷ್ಟವಾಗಿದೆ. ವೈಯಕ್ತಿಕ ಮಟ್ಟದಲ್ಲಿ ಹೇಳಬೇಕು ಅಂದರೆ, ರತನ್ ಟಾಟಾ ಅವರ ಅಗಲಿಕೆಯಿಂದಾಗಿ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವ ನನಗೆ ಅಪಾರ ದುಃಖವನ್ನು ತುಂಬಿದೆ. ಅವರ ಜೊತೆಗೆ ಹಲವಾರು ಸಂದರ್ಭದಲ್ಲಿ ನಡೆಸಿದ ಮಾತುಕತೆಗಳು ನನಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡಿತ್ತು. ಟಾಟಾ ಅವರ ವ್ಯಕ್ತಿತ್ವದಲ್ಲಿದ್ದ ಉದಾತ್ತತೆ ಮತ್ತು ಸಾಕಾರಗೊಳಿಸಿದ ಉತ್ತಮ ಮಾನವೀಯ ಮೌಲ್ಯಗಳಿಂದಾಗಿ ಅವರ ಬಗೆಗೆ ನನ್ನ ಗೌರವವನ್ನು ಹೆಚ್ಚಿಸಿತು.

Ratan Tata

“ರತನ್ ಟಾಟಾ ಅವರು ದೂರದೃಷ್ಟಿಯ ಕೈಗಾರಿಕೋದ್ಯಮಿ ಮತ್ತು ದಾನ- ಧರ್ಮ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದವರು. ಯಾವಾಗಲೂ ಸಮಾಜಕ್ಕೆ ಹೆಚ್ಚೆಚ್ಚು ಒಳಿತಾಗಬೇಕೆಂದು ಶ್ರಮಿಸಿದರು. ಶ್ರೀ ರತನ್ ಟಾಟಾ ಅವರ ನಿಧನದೊಂದಿಗೆ, ಭಾರತವು ತನ್ನ ಅತ್ಯಂತ ಶ್ರೇಷ್ಠ ಮತ್ತು ಸಹೃದಯ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಶ್ರೀ ಟಾಟಾ ಭಾರತವನ್ನು ಜಗತ್ತಿನ ಮಟ್ಟಕ್ಕೆ ಕೊಂಡೊಯ್ದರು ಮತ್ತು ವಿಶ್ವದ ಅತ್ಯುತ್ತಮವಾದುದನ್ನು ಭಾರತಕ್ಕೆ ತಂದರು. ಅವರು ಹೌಸ್ ಆಫ್ ಟಾಟಾವನ್ನು ಸಾಂಸ್ಥಿಕಗೊಳಿಸಿದರು ಮತ್ತು 1991ರಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಮಯದಿಂದ ಟಾಟಾ ಸಮೂಹವನ್ನು 70 ಪಟ್ಟು ಬೆಳೆಸುವುದರೊಂದಿಗೆ ಅಂತರರಾಷ್ಟ್ರೀಯ ಉದ್ಯಮವನ್ನಾಗಿ ಮಾಡಿದರು.

ಟಾಟಾ ಸಮೂಹದ ರತನ್ ಟಾಟಾ ನಿಧನಕ್ಕೆ ಮುಕೇಶ್ ಅಂಬಾನಿಯಿಂದ ಭಾವುಕ ಸಂದೇಶ / Mukesh Ambani Condolences

“ರಿಲಯನ್ಸ್, ನೀತಾ ಮತ್ತು ಅಂಬಾನಿ ಕುಟುಂಬದ ಪರವಾಗಿ, ಟಾಟಾ ಕುಟುಂಬ ಮತ್ತು ಇಡೀ ಟಾಟಾ ಸಮೂಹದಿಂದ ಅಗಲಿದ ಸದಸ್ಯರೊಬ್ಬರಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ಕಳುಹಿಸುತ್ತೇನೆ.

“ರತನ್, ನೀವು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತೀರಿ.

“ಓಂ ಶಾಂತಿ”.

ಮುಕೇಶ್ ಅಂಬಾನಿ

ಮನುಷ್ಯ ಸರಳ.. ಮನೆ ಇನ್ನೂ ಸರಳ.. Ratan Tata ಕೊನೆಯವರೆಗೂ ಇಲ್ಲೇ ವಾಸಿಸುತ್ತಿದ್ದರು..!

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…