ಆತ್ಮಚರಿತ್ರೆಯಲ್ಲಿ ಮದುವೆ ವಿಚಾರ ಪ್ರಸ್ತಾಪಿಸಿದ್ದಕ್ಕೆ 30 ಕೋಟಿ ರೂ.ಗೆ ಬೇಡಿಕೆಯಿಟ್ಟ ಮಾಜಿ ಪತ್ನಿ; ಪ್ರಸಿದ್ಧ ಗಾಯಕನಿಗೆ ಇದೆಂಥ ಪೀಕಲಾಟ..!

john elton
Published on

ಆತ ಜಗತ್ತು ಮೆಚ್ಚಿದ ಗಾಯಕ, ಆಕೆ ಸೌಂಡ್​ ಇಂಜಿನಿಯರ್​ ಆಗಿದ್ದವಳು. ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿ ಮದುವೆಯಾದರು. ಆದರೆ, ದಾಂಪತ್ಯ ಜೀವನ ನಡೆದದ್ದು ಕೇವಲ ನಾಲ್ಕು ವರ್ಷ. ಇದಾಗಿ 22 ವರ್ಷಗಳೇ ಕಳೆದಿವೆ. ತನ್ನ ಹಳೆಯ ಮದುವೆ ವಿಚಾರವನ್ನು ಆತ್ಮಕತೆಯಲ್ಲಿ ಪ್ರಸ್ತಾಪಿಸಿರುವುದೇ ಈಗ ಪೀಕಲಾಟ ತಂದಿಟ್ಟಿದೆ.

ಇದು ಪ್ರಸಿದ್ಧ ಸಂಗೀತಗಾರ, ಗೀತ ರಚನೆಕಾರ ಸರ್​ ಜಾನ್​ ಎಲ್ಟನ್​ ಕಥೆ. ಸದ್ಯ 73 ವರ್ಷದ ಎಲ್ಟನ್​ ತನ್ನ ಆತ್ಮಕಥೆಯಲ್ಲಿ ಮಾಜಿ ಪತ್ನಿ ರೆನೆಟ್​ ಬ್ಲಾವೆಲ್​ ವಿಚಾರ ಪ್ರಸ್ತಾಪಿಸಿದ್ದಾರೆ. ಇದು ತೆನೆಟ್​ ಆಕ್ರೋಶಕ್ಕೆ ಕಾರಣವಾಗಿದ್ದು, ವಿವಾಹ ವಿಚ್ಛೇದನ ಒಪ್ಪಂದವನ್ನು ಮುರಿದಿದ್ದಕ್ಕೆ ಅಂದಾಜು 30 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್​ ಮೆಟ್ಟಿಲೇರಿದ್ದಾಳೆ.

ಎಲ್ಟನ್​ ಪ್ರಸಿದ್ಧ ಆಲ್ಬಂ ಬ್ರೇಕಿಂಗ್​ ಹಾರ್ಟ್ ಕೆಲಸದಲ್ಲಿ ತೊಡಗಿದ್ದಾಗ ರೆನೆಟ್​ ಪರಿಚಯವಾಗಿ 1984ರಲ್ಲಿ ಮದುವೆಯಾಘಿದ್ದರು. ಆದರೆ, 1988ರಲ್ಲಿ ಇಬ್ಬರು ಬೇರೆಯಾಗಿದ್ದರು. ​ ಈ ವೇಳೆ ರೆನೆಟ್​ 50-100 ಕೋಟಿ ರೂ ನಡುವಿನ ಮೊತ್ತವನ್ನು ಜೀವನಾಂಶವಾಗಿ ಪಡೆದಿದ್ದಳು ಎನ್ನಲಾಗಿತ್ತು.

ಆತ್ಮಕತೆಗೆ ಸಂಬಂಧಿಸಿದಂತೆ ಈ ಹಿಂದೆಯೇ ರೆನೆಟ್​ ಆಕ್ಷೇಪಣೆ ಎತ್ತಿದ್ದಳು. ಆಗ, ಎಲ್ಟನ್​ ಅದರಲ್ಲಿ ಕೆಲ ಭಾಗಗಳನ್ನು ಕೈಬಿಡಲು ಒಪ್ಪಿಕೊಂಡಿದ್ದಾಗಿ ಕೋರ್ಟ್​ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಹೇಳಲಾಗಿದೆ.

2019ರಲ್ಲಿ ತೆರೆ ಕಂಡ ಎಲ್ಟನ್​ ಬಯೋಪಿಕ್​ ರಾಕೆಟ್​ಮ್ಯಾನ್​ ತಡೆಗೂ ರೆನೆಟ್​ ಪ್ರಯತ್ನಿಸಿದ್ದಳು. ಆತ್ಮಕಥೆಯಲ್ಲಿ ಆಕೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ಎಲ್ಟನ್​ ಬರೆದಿದ್ದಾನೆ. 67 ವರ್ಷದ ರೆನೆಟ್​ ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net