More

    ದೆಹಲಿ ಮಾಂಸದಡ್ಡೆಯ ಕರಾಳತೆ; 12ರ ಬಾಲೆಗೆ ಡ್ರಗ್ಸ್​ ನೀಡಿ ವೇಶ್ಯಾವಾಟಿಕೆ; 6 ವರ್ಷಗಳ ನರಕದ ಬಳಿಕ ಸಿಕ್ತು ನ್ಯಾಯ

    ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಪ್ರಕರಣವೊಂದರಲ್ಲಿ ದೆಹಲಿ ಕೋರ್ಟ್​ 12ರ ಬಾಲೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಮಹಿಳೆಗೆ 24 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ. ಇದಷ್ಟೇ ಅಲ್ಲದೇ, ಈಕೆಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 20 ವರ್ಷಗಳ ಶಿಕ್ಷೆ ವಿಧಿಸಿದೆ. ಸೋನು ಪಂಜಾಬನ್​ ಅಲಿಯಾಸ್​ ಗೀತಾ ಆರೋರಾ ಶಿಕ್ಷೆಗೊಳಗಾದ ಮಹಿಳೆ. ಜತೆಗೆ, ಸಂದೀಪ್​ ಬೇಡ್ವಾಲ್​ ಕೂಡ ಶಿಕ್ಷೆಗೆ ಗುರಿಯಾಗಿದ್ದಾನೆ.

    ದೆಹಲಿಯಲ್ಲಿನ ವೇಶ್ಯಾವಾಟಿಕೆಯ ಕರಾಳ ರೂಪವನ್ನು ಅನಾವರಣಗೊಳಿಸಿದ ಪ್ರಕರಣವಿದು. 2009ರಲ್ಲಿ 12 ವರ್ಷದ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಸೀಮಾ ಎಂಬಾಕೆಗೆ ಆಕೆಯನ್ನು ಮಾರುತ್ತಾನೆ. ಸೀಮಾ ಆಕೆಯನ್ನು ಸೋನು ಪಂಜಾಬನ್​ಗೆ ಮಾರಿದ್ದಳು.

    ಇದನ್ನೂ ಓದಿ; ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಹುಡುಗಿಯರಿಗೆ ವಂಚಿಸೋದೇ ಖಯಾಲಿ 

    ಬಾಲಕಿಯನ್ನು ಗ್ರಾಹಕರ ಬಳಿ ಕಳುಹಿಸುವ ಮುನ್ನ ಆಕೆಗೆ ಡ್ರಗ್ಸ್​ ನೀಡಲಾಗುತ್ತಿತ್ತು. ವಯಸ್ಕಳಂತೆ ಕಾಣುವಂತಾಗಲು ಆಕೆ ಮೇಲೆ ಉದ್ದೀಪನ ಮದ್ದು ಪ್ರಯೋಗಿಸಲಾಗಿತ್ತು. ಸತತ ಐದು ವರ್ಷಗಳ ಕಾಲ ಈ ನರಕಯಾತನೆ ಅನುಭವಿಸಿದ್ದ ಬಾಲಕಿ, 2014ರಲ್ಲಿ ಆಕೆಯ ಜಾಲದಿಂದ ತಪ್ಪಿಸಿಕೊಂಡು ನಜಾಫ್​ಗಢ್​ ಪೊಲೀಸರಿಗೆ ದೂರು ನೀಡಿದ್ದಳು.

    ತನಿಖೆ ನಡೆಸಿದ್ದ ಪೊಲೀಸರು ಸೋನು ಪಂಜಾಬನ್​ ನಡೆಸುತ್ತಿದ್ದ ವೇಶ್ಯಾವಟಿಕೆಯ ಜಾಲವನ್ನು ಬಯಲಿಗೆಳೆದಿದ್ದರು. ಜುಲೈ 17ರಂದೇ ಆರೋಪ ಸಾಬೀತಾಗಿದೆ ಎಂದು ಕೋರ್ಟ್​ ಘೋಷಿಸಿತ್ತು. ಇದಾಗುತ್ತಿದ್ದಂತೆ ಸೋನು ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಳು. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts