ಸೀತಾನದಿ ಪರಿಸರದಲ್ಲಿ ಮತ್ತೆ ಕಾಡಾನೆ ಎಂಟ್ರಿ!

1 Min Read
ಸೀತಾನದಿ ಪರಿಸರದಲ್ಲಿ ಮತ್ತೆ ಕಾಡಾನೆ ಎಂಟ್ರಿ!
ಆನೆ ದಾಳಿಯಿಂದ ಕೃಷಿ ಹಾನಿಯಾಗಿರುವುದು.

ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಕೃಷಿ ನಾಶ ಮಾಡಿರುವ ಬೆನ್ನಲ್ಲೇ ಮತ್ತೆ ಇಲ್ಲಿನ ಕೃಷಿಕರನ್ನು ಆತಂಕಕ್ಕೆ ದೂಡಿದೆ.

ಹೊಸವಕ್ಲು ತೋಟಕ್ಕೆ ಕಾಡಾನೆ ಲಗ್ಗೆ

ನಾಡ್ಪಾಲು ಗ್ರಾಮದ ಸೀತಾನದಿ ಹೊಸವಕ್ಲು ವನಜಾ ಶೆಟ್ಟಿ ಅವರ ತೋಟಕ್ಕೆ ಶನಿವಾರ ಕಾಡಾನೆ ದಾಳಿ ನಡೆಸಿದೆ. ಇದರಿಂದಾಗಿ ವನಜಾ ಶೆಟ್ಟಿ ಅವರ ಕೃಷಿ ತೋಟ ಹಾನಿಗೀಡಾಗಿದೆ.

ಸೀತಾನದಿ ಗ್ರಾಮಸ್ಥರಿಂದ ಪ್ರತಿಭಟನೆ

ಹಲವು ದಿನಗಳಿಂದ ಈ ಪರಿಸರದಲ್ಲಿ ಒಂಟಿ ಕಾಡಾನೆ ತೋಟಗಳಿಗೆ ನುಗ್ಗಿ ಬಾಳೆ, ತೆಂಗು, ಅಡಕೆ ಮರಗಳಿಗೆ ಹಾನಿ ಮಾಡಿದೆ. ಆದರೆ ಅರಣ್ಯ ಇಲಾಖೆ ರೈತರ ಕೃಷಿ ಭೂಮಿಗೆ ತುರ್ತಾಗಿ ರಕ್ಷಣಾ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈ ಬಗ್ಗೆ ಮೂರು ದಿನ ಹಿಂದೆ ಸೀತಾನದಿ ಪರಿಸರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದ್ದರು.

See also  ರಣ ಬಿಸಿಲಿಗೆ ಕೊತಕೊತ; ಈ ಬಾರಿ ಯಾಕೆ ಹೀಗಾಗಿದೆ?
Share This Article