ಮಂಗಳೂರಿನಲ್ಲಿ ಬೈಕ್‌ನಲ್ಲಿ ಬಂದು ಮೊಬೈಲ್ ಲೂಟಿ

FIR-2
Published on


ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಲೂಟಿ ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಾಹುಲ್ ಎನ್.ರವರು ಜೂ.21ರಂದು ರಾತ್ರಿ ಮಂಗಳೂರು ನಗರದ ಕೇಂದ್ರ ರೈಲ್ವೆ ನಿಲ್ದಾಣ ಕಡೆಯಿಂದ ಕ್ಲಾಕ್‌ಟವರ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯನಿವರ್ಸಿಟಿ ಕಾಲೇಜ್ ನಿಂದ ಸ್ವಲ್ಪ ಮುಂದುಗಡೆ ತಲುಪಿದಾಗ ದ್ಚಿಚಕ್ರ ವಾಹನದಲ್ಲಿ ಹಿಂಭಾಗದಿಂದ ಸ್ಕೂಟರ್‌ನಲ್ಲಿ ಬಂದ ಇಬ್ಬರು ಯುವಕರು ರಾಹುಲ್ ಅವರ ಬಲಕೈಯಲ್ಲಿದ್ದ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ. ಕಳವಾದ ಮೊಬೈಲ್ ಸೆಟ್‌ನ ಅಂದಾಜು ಮೊತ್ತ 21ಸಾವಿರ ರೂ. ಎಂದು ತಿಳಿದು ಬಂದಿದೆ.


ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net