ಏಕಾಏಕಿ ಶಾಲೆಯ ತರಗತಿ ಒಳಗೆ ಬಂತು ದೈತ್ಯ ಕಾಡಾನೆ;Elephant

elephant
Published on

ಗುವಾಹಟಿ: ಶಾಲೆಯ ತರಗತಿಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಓಡಾಡೋದನ್ನ ನಾವು ನೋಡಿರುತ್ತೇವೆ. ಆದರೆ ಇಲ್ಲಿ ಕಾಡಾನೆಯೊಂದು ತರಗತಿಗೆ ಎಂಟ್ರಿ ಕೊಟ್ಟು, ಫುಲ್​ ರೌಂಡ್​ ಹಾಕಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿಗಳು ಮುಂದಿನ ತರಗತಿಯ ಅಡ್ಮಿಷನ್‌ಗಾಗಿ ಶಾಲೆಗೆ ಭೇಟಿದ್ದಾರೆ. ಆದರೆ ಈ ಸಮಯದಲ್ಲಿ ಶಾಲೆಗೆ ಬಂದ ಆನೆಯನ್ನ ನೋಡಿ ಮಕ್ಕಳು, ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರೇ ಬೆಚ್ಚಿಬಿದ್ದಿದ್ದಾರೆ.

ಇನ್ನೂ ಹೀಗೆ ನಾನು ನಡೆದಿದ್ದೇ ದಾರಿ ಅಂತ ಆನೆ ಹೆಜ್ಜೆ ಇಡ್ತಿರೋದು ಗುವಾಹಟಿಯ ನರೇಂಗಿಯಲ್ಲಿರುವ ಆರ್ಮಿ ಸ್ಕೂಲ್​ನಲ್ಲಿ. ತರಗತಿಗೆ ಎಂಟ್ರಿ ಕೊಟ್ಟ ಕಾಡಾನೆ ಶಾಲಾ ತರಗತಿ ಹಾಗೂ ಲ್ಯಾಬ್ ಸೇರಿದಂತೆ ಇಡೀ ಕ್ಯಾಂಪಸ್​ನಲ್ಲಿ ತಿರುಗಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕುಷಿ ವಿಚಾರ ಏನು ಅಂದ್ರೆ ಇಡೀ ಶಾಲೆಯಲ್ಲಿ ವಾಕಿಂಗ್​ ಮಾಡಿದ ಈ ಕಾಡಾನೆ ಒಂದೇ ಒಂದು ವಸ್ತುವನ್ನೂ ಸಹ ಹಾನಿ ಮಾಡಿಲ್ಲ. ತನ್ನ ಪಾಡಿಗೆ ತಾನು ಒಂದು ರೌಂಡ್​ ವಿಸಿಟ್​ ಕೊಟ್ಟು, ಈಜುಕೊಳದಲ್ಲಿ ಸ್ವಲ್ಪ ಹೊತ್ತು ಈಜಾಡಿ ಬಳಿಕ ವಾಪಸ್ಸಾಗಿದೆ.

ಶಾಲೆಗೆ ಆನೆ ಬರಲು ಕಾರಣವೇನು?

ಅಸ್ಸಾಂ ರಾಜ್ಯದಲ್ಲಿ ಹೆಚ್ಚಾಗಿ ಆನೆಗಳಿದ್ದು, ಗುವಾಹಟಿಯ ನರೇಂಗಿಯಲ್ಲಿರುವ ಆರ್ಮಿ ಸ್ಕೂಲ್ ಹಾಗೂ ಆನೆಗೂ ನಿರಂತರ ಸಂಬಂಧವಿದೆ. ಈ ಶಾಲಾ ಪಕ್ಕದಲ್ಲಿರುವ ದಟ್ಟ ಕಾಡು ಆನೆಯ ವಾಸ ಸ್ಥಳವಾಗಿದೆ. ಹಾಗಾಗಿ ಈ ಆರ್ಮಿ ಸ್ಕೂಲ್‌ಗೆ ಈ ದೈತ್ಯ ಆನೆ ಪದೇ ಪದೇ ಎಂಟ್ರಿ ಕೊಡುತ್ತಂತೆ. ಹೀಗಾಗಿ ಆರ್ಮಿ ಶಾಲೆಯ ಸಿಬ್ಬಂದಿ ಶಾಲಾ ಆವರಣದ ಹೊರಭಾಗದಲ್ಲಿ ಆನೆಗಾಗಿ ವಿಶೇಷ ಆಹಾರ ಇಡುತ್ತಾರಂತೆ. ಇನ್ನೂ ಆನೆ ತರಗತಿಗೆ ಎಂಟ್ರಿಕೊಟ್ಟಿರುವ ದೃಶ್ಯವನ್ನು ಅಲ್ಲಿನ ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದು, ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net