

ಬೆಂಗಳೂರು: ರಾಜ್ಯದಲ್ಲಿ ಕಾಡಾನೆ ದಾಳಿಗೆ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ಇಬ್ಬರು ಬಲಿಯಾಗಿದ್ದು, ಸ್ಥಳೀಯ ಜನತೆ ಆತಂಕದಲ್ಲಿದ್ದಾರೆ.
ಕಾರ್ಮಿಕ ಬಲಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಿಬಿಟಿಸಿ ಬೀಟಿಕಾಡು ತೋಟದಲ್ಲಿ ಕಾರ್ಮಿಕ ಸಂದೀಪ್(22)ನನ್ನು ತುಳಿದು ಕಾಡಾನೆ ಕೊಂದಿದೆ. ಕಾಫಿ ಕಣದಲ್ಲಿ ಕಾವಲುಗಾರನಾಗಿದ್ದ ಸಂದೀಪ್, ನಿನ್ನೆ ನಿದ್ರೆಮಂಪರಿನಲ್ಲಿದ್ದ ವೇಳೆ ಹಠಾತ್ತನೆ ಬಂದ ಆನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಕಾರ್ಮಿಕನ ತಲೆ ಛಿದ್ರಗೊಂಡು ಸ್ಥಳದಲ್ಲೇ ಅಸುನೀಗಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇನ್ನು ಸಕಲೇಶಪಪುರದಲ್ಲೂ ಕಾಡಾನೆ ಹಾವಳಿ ಮುಂದುವರಿದಿದ್ದು, ನಿನ್ನೆ ರಾತ್ರಿ ಇಲ್ಲೂ ಒಬ್ಬ ಬಲಿಯಾಗಿದ್ದಾನೆ. ಇದನ್ನೂ ಓದಿರಿ ಮಧುಬಂಗಾರಪ್ಪ, ಜಿಟಿಡಿ, ಶಶಿಭೂಷಣ್, ಅಸ್ನೋಟಿಕರ್ ಜೆಡಿಎಸ್ ಬಿಡ್ತಾರಾ? ಎಚ್ಡಿಡಿ ಸ್ಫೋಟಕ ಹೇಳಿಕೆ
ಲಾರಿ ಚಾಲಕ ಸಾವು: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಕೆಂಪುಹಳ್ಳ ಬಳಿ ನಿನ್ನೆ ನೆನ್ನೆ ಸಂಜೆ 4 ಗಂಟೆಯಿಂದ ಓಡಾಡುತ್ತಿದ್ದ ಕಾಡಾನೆ ಲಾರಿ ಚಾಲಕನ ಪ್ರಾಣ ತೆಗೆದಿದೆ. ರಾತ್ರಿ 7 ಗಂಟೆ ಸುಮಾರಿನಲ್ಲಿ ಉತ್ತರ ಭಾರತ ಮೂಲದ ಲಾರಿ ಚಾಲಕನ ಲಾರಿ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ ಮಾಡಿದೆ.