ತಗಡು ಶೀಟ್ ಅಳವಡಿಕೆ ವೇಳೆ ದುರಂತ: ವಿದ್ಯುತ್ ಪ್ರವಹಿಸಿ ಯುವಕ ಸಾವು

web - kin death
ಮೃತಪಟ್ಟ ಅವಿನಾಶ್ ರತ್ನಾಕರ ಹೆಗ್ಡೆ.
Published on

ಕಿನ್ನಿಗೋಳಿ: ಹಳೆಯಂಗಡಿಯ ಲೈಟ್‌ಹೌಸ್ ನಿವಾಸಿ ಅವಿನಾಶ್ ರತ್ನಾಕರ ಹೆಗ್ಡೆ(32) ಎಂಬುವರು ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿ ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.

ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪೈಪ್

ಉಲ್ಲಂಜೆಯ ಮನೆಯೊಂದರಲ್ಲಿ ತಗಡು ಶೀಟ್ ಅಳವಡಿಸುತ್ತಿದ್ದಾಗ ಅವಿನಾಶ್ ಕೈಯಲ್ಲಿದ್ದ ಪೈಪ್ ಸಮೀಪದ ವಿದ್ಯುತ್ ತಂತಿಗೆ ತಗುಲಿದ್ದು. ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದಿದ್ದರು.

ಫಲಿಸದ ಪ್ರಯತ್ನ

ಕೂಡಲೇ ಅವರನ್ನು ನಿತಿನ್ ಹಾಗೂ ರಕ್ಷಿತ್ ಎಂಬುವರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದಾಗಲೇ ಮೃತಪಟ್ಟಿದ್ದರು. ಅವಿನಾಶ್ ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net