

ವಿಟ್ಲ: ಕಬಕ ಜಂಕ್ಷನ್ ಪಕ್ಕದ ಕುಳ ಗ್ರಾಮ ವ್ಯಾಪ್ತಿಯ ಜನವಸತಿ ಪ್ರದೇಶದಕ್ಕೆ ಚಿರತೆ ಆಗಮಿಸಿದ ಹೆಜ್ಜೆ ಗುರುತುಗಳು ಕಾಣಿಸಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಕಬಕ ಪರಿಸರದಲ್ಲಿರುವ ಕುಳ ಗ್ರಾಮ ಕರಣಿಕರ ಕಛೇರಿ ಸಮೀಪದಲ್ಲಿ ಬುಧವಾರ ರಾತ್ರಿ ದೊಡ್ಡ ಗಾತ್ರದ ಚಿರತೆಯೊಂದು ಪತ್ತೆಯಾಗಿದೆ. ನಾಯೊಂದನ್ನು ತೆಗೆದುಕೊಂಡು ಹೋಗಿದ್ದನ್ನು ನೋಡಿದ್ದಾರೆನ್ನಲಾಗಿದೆ. ಕೆಲವು ದಿನಗಳಿಂದ ಈ ಭಾಗದಲ್ಲಿ ನಾಯಿಗಳು ನಾಪತ್ತೆಯಾಗುತ್ತಿದ್ದುದಕ್ಕೆ ಈಗ ಪುಷ್ಠಿ ಸಿಕ್ಕಿದೆ. ಮಳೆ ಕಡಿಮೆಯಾದ ಕಾರಣದಿಂದ ಮಣ್ಣಿನಲ್ಲಿ ಪ್ರಾಣಿಯ ಹೆಜ್ಜೆ ಗುರುತುಗಳು ಉಳಿದುಕೊಂಡಿದೆ.
ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಾಗ ಚಿರತೆ ಅಲ್ಲ ಎಂಬ ರೀತಿಯಲ್ಲಿ ಊಡಾಫೆಯ ಉತ್ತರ ನೀಡಿದ್ದಾರೆನ್ನಲಾಗಿದೆ.