ಇಲೆಕ್ಟ್ರಿಕ್ ಕಾರು ತಡೆಬೇಲಿಗೆ ಡಿಕ್ಕಿ

mul (1)
Published on

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಕೋಲ್ನಾಡು ಕಿರು ಸೇತುವೆಯ ತಡೆಬೇಲಿಗೆ ಇಲೆಕ್ಟ್ರಿಕ್ ಕಾರು ಡಿಕ್ಕಿ ಹೊಡೆದು ಕಾರಿನ ಚಾಲಕ ಮೈಸೂರು ನಿವಾಸಿ ಮೊಹಮ್ಮದ್ ಅಬಾಜ್ ಅಹಮದ್ ಸಹಿತ ಮನೆಯವರು ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.

ಭಾನುವಾರ ತಡರಾತ್ರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಹೊಸ ಮಹಿಂದ್ರ ಇಲೆಕ್ಟ್ರಿಕ್ ಕಾರು ಕೋಲ್ನಾಡ್ ಕಿರು ಸೇತುವೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಬದಿಗೆ ಚಲಿಸಿ ಸೇತುವೆಯ ಸಿಮೆಂಟ್ ತಡೆಬೇಲಿಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ ಮೇಲೇರಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಬಂದು ನಿಂತಿದೆ.

ಅಪಘಾತದ ರಭಸಕ್ಕೆ ಹೆದ್ದಾರಿ ಬದಿಯ ಸಿಮೆಂಟ್ ಕಂಬ ಹಾಗೂ ಕಾರಿನ ಟಯರ್ ಸಮೇತ ಎದುರು ಭಾಗ ಕಿತ್ತು ಹೋಗಿ ನಜ್ಜುಗುಜ್ಜಾಗಿದೆ.

ಅಪಘಾತದ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು ಕೂಡಲೇ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾರನ್ನು ತೆರವುಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net