

ಕಾಸರಗೋಡು: ನಗರದ ಪಿಲಿಕುಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದ ಸೇವಾ ಕೌಂಟರ್, ಕಚೇರಿ, ದಾಸ್ತಾನು ಕೊಠಡಿ ಬಾಗಿಲು ಒಡೆಯಲಾಗಿದ್ದು, ಸೇವಾಕೌಂಟರ್‌ನಿಂದ 1 ಸಾವಿರ ರೂ. ನಗದು ಕಳವುಗೈಯಲಾಗಿದೆ. ಕಚೇರಿಯ ಸಿ.ಸಿ ಕ್ಯಾಮರಾದ ಹಾರ್ಡ್ ಡಿಸ್ಕ್, ಧ್ವನಿವರ್ಧಕದ ಆಂಪ್ಲಿಫಯರ್ ಕಳವು ನಡೆಸಿದ್ದರೂ, ಇದನ್ನು ದೇಗುಲ ವಠಾರದಿಂದ ಪತ್ತೆಹಚ್ಚಲಾಗಿದೆ. ಹಾರ್ಡ್ ಡಿಸ್ಕನ್ನು ಬಾವಿಗೆಸೆದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸಮಿತಿ ಕಾರ್ಯದರ್ಶಿ ಸಜಿತ್ ಕುವಾರ್ ನೀಡಿದ ದೂರಿನನ್ವಯ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ವಾಹಿತಿ ಸಂಗ್ರಹಿಸಿದೆ.