

ಬೆಂಗಳೂರು: ವಿಧಾನ ಪರಿಷತ್ನಲ್ಲಿ ತೆರವಾದ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಜೂನ್ 13ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನಾವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ 11 ಸದಸ್ಯರ ಅಧಿಕಾರವಾಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇಂದು (ಮೇ 20) ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ಮೇಲ್ಮನೆಯ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಾಗಿದ್ದ ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್. ಎಸ್. ರುದ್ರೇಗೌಡ, ಕೆ. ಹರೀಶ್ ಕುಮಾರ್, ಅರವಿಂದ್ ಕುಮಾರ್ ಅರಳಿ, ಎನ್.ಎಸ್, ಬೋಸರಾಜು. ಕೆ.ಗೋವಿಂದ್ರಾಜ್. ಡಾ.ತೇಜಸ್ವಿನಿ ಗೌಡ. ಮುನಿರಾಜುಗೌಡ ಪಿ.ಎಂ. ಕೆ.ಪಿ. ನಂಜುಂಡಿ. ಬಿ.ಎಂ.ಫಾರುಕ್ ಅವರ ಅವಧಿ ಕೊನೆಯಾಗಲಿದೆ. ಆ ಹಿನ್ನೆಲೆಯಲ್ಲಿ ತೆರವಾದ 11 ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.