ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ 7 ಸ್ಥಾನ ಗೆದ್ದು ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಬೆಂಬಲಿತರು 5 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಮೈತ್ರಿ ಪಕ್ಷ ಅತಿ ಹೆಚ್ಚು ನಿರ್ದೇಶಕ ಸ್ಥಾನ ಗೆದ್ದು ಆಡಳಿತ ಹಿಡಿಯುವುದು ಖಚಿತವಾಗಿದೆ. ಸಾಮಾನ್ಯ ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ರವೀಂದ್ರ ಕುಮಾರ್ ರುದ್ರಪಾದ (659 ಮತಗಳು), ಮೈತ್ರಿ ಬೆಂಬಲಿತ ಕೂಟದ ಜಯಪ್ರಕಾಶ್ ಕೂಜುಗೋಡು(572), ವೆಂಕಟೇಶ್ ಎಚ್.ಎಲ್.(556), ಕಿರಣ್ ಪೈಲಾಜೆ(540), ಯಶೋದಕೃಷ್ಣ ಕಿಟ್ಟ ನೂಚಿಲ (500), ಕಾಂಗ್ರೆಸ್ ಬೆಂಬಲಿತ ಸೋಮಶೇಖರ ಕಟ್ಟೆಮನೆ (495), ಹಿಂದುಳಿದ ವರ್ಗ ಎಯಲ್ಲಿ ಮೈತ್ರಿಯ ಗಿರೀಶ್ ಆಚಾರ್ಯ ಪೈಲಾಜೆ (557), ಹಿಂದುಳಿದ ವರ್ಗ ಬಿಯಲ್ಲಿ ಕಾಂಗ್ರೆಸ್ ಬೆಂಬಲಿತ ಮೋಹನದಾಸ್ ರೈ(542), ಮಹಿಳಾ ಮೀಸಲು ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ರಮ್ಯಾ ಪೈಲಾಜೆ (622), ಮೈತ್ರಿ ಬೆಂಬಲಿತ ಭಾರತಿ ದಿನೇಶ್ (579), ಪರಿಶಿಷ್ಟ ಜಾತಿ ವಿಭಾಗದಲ್ಲಿ ಮೈತ್ರಿಯ ದುಗ್ಗಪ್ಪ ನಾಯ್ಕ ಎಚ್.(566), ಪರಿಶಿಷ್ಟ ಪಂಗಡ ಮೀಸಲು ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ಮಾಧವ ದೇವರಗದ್ದೆ (637) ವಿಜಯ ಸಾಧಿಸಿದರು.