ಚುನಾವಣೆ ಗೆದ್ದ ನಂತರವೂ ಜಗಳವಾಡಿದ ಗ್ರಾಮ ಪಂಚಾಯಿತಿ ನೂತನ ಸದಸ್ಯರು!

post election fight
Published on

ದೇವನಹಳ್ಳಿ: ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಬೆಂಬಲಿತ ನೂತನ ಸದಸ್ಯರಿಗೆ ಪೂಜೆ ಮಾಡಿದ ಘಟನೆ ದೇವನಹಳ್ಳಿಯ ಹಾರೋಹಳ್ಳಿಯಲ್ಲಿ ನಡೆದಿದೆ.

ಪೂಜೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಚುನಾವಣೆ ಮತ ಎಣಿಕೆಯಾದ ನಂತರ ಗೆಲುವಿನ ವಿಚಾರ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳಿಗೆ ತಿಳಿದಿದೆ. ಇದಾದ ಮೇಲೆ ದೇವಾಲಯಕ್ಕೆ ತೆರಳಿದ ಕಾಂಗ್ರೆಸ್ ಬೆಂಬಲಿತರು ಪೂಜೆ ನೆರವೇರಿಸಿದ್ದಾರೆ.

ಈ ವೇಳೆ ಜೆಡಿಎಸ್ ನ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸೆಲೆಬ್ರೆಷನ್ ವಿಚಾರವಾಗಿ ಕಿರಿಕ್ ನಡೆದಿದೆ. ಹೀಗಾಗಿ ವಿಜಯಪುರ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದ್ದು, ಎರಡು ಪಕ್ಷಗಳ ಗುಂಪನ್ನ ಪೊಲೀಸರು ಚದುರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net