ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಬಾಗಲಕೋಟೆ ಮೂಲದ ವೃದ್ಧೆ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಸವಾಜಸೇವಕ ನಿತ್ಯಾನಂದ ಒಳಕಾಡು ಸೋಮವಾರ ರಕ್ಷಿಸಿದ್ದಾರೆ.
ರಥಬೀದಿಯ ರಾವೇಂದ್ರ ಮಠದ ಬಳಿ ಮೊಮ್ಮಕ್ಕಳಾದ ಹನುಮಂತ (10), ಪ್ರೇಮಾ (16) ಎಂಬ ಇಬ್ಬರು ಮೊಮ್ಮಕ್ಕಳೊಂದಿಗೆ ಕೀರವ್ವ (75) ಅಳುತ್ತ ಕುಳಿತಿದ್ದರು. ವಾಹಿತಿ ತಿಳಿದ ಒಳಕಾಡು ಸ್ಥಳಕ್ಕಾಗಮಿಸಿ ಅವರನ್ನು ವಿಚಾರಿಸಿದಾಗ, ಮೊಮ್ಮಕ್ಕಳ ತಂದೆ ಒಂದು ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದು, ನನ್ನ ಮಗನ ಹುಡುಕಾಟ ನಡೆಸಲು ಉಡುಪಿಗೆ ಬಂದಿರುವುದಾಗಿ ವೃದ್ಧೆ ತಿಳಿಸಿದ್ದಾಳೆ. ವೃದ್ಧೆಗೆ ಹೊಸಬದುಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಬಾಲಕಿಗೆ ನಿಟ್ಟೂರು ಬಾಲಕಿಯರ ಬಾಲಭವನದಲ್ಲಿ ಹಾಗೂ ಬಾಲಕನಿಗೆ ದೊಡ್ಡಣಗುಡ್ಡೆಯ ಬಾಲಕರ ಬಾಲಭವನದಲ್ಲಿ ತುರ್ತು ಆಶ್ರಯ ನೀಡಲಾಗಿದೆ. ಹೊಸಬದುಕು ಆಶ್ರಮದ ವಿನಯಚಂದ್ರ, ರಾಜಶ್ರೀ ಮತ್ತು ಮಕ್ಕಳ ರಕ್ಷಣಾ ಟಕದ ಪ್ರಕಾಶ ನಾಯ್ಕ, ಅಂಬಿಕಾ