

ವಿಜಯವಾಣಿ ಸುದ್ದಿಜಾಲ ಉಡುಪಿ
ಮಕ್ಕಳಲ್ಲಿರುವ ಪ್ರತಿಭೆಯನ್ನು ತಕ್ಷಣ ಗುರುತಿಸುವುದು ಕಷ್ಟ. ಆದರೆ, ಹೆಚ್ಚಿನ ಅಂಕ ಗಳಿಕೆ ಮಾತ್ರ ಪ್ರತಿಭೆಯಲ್ಲ. ಪ್ರತಿಭೆ ಗುರುತಿಸಿದ್ದರಿಂದ ಅಹಂಕಾರ ಬಂದು ಆ ಪ್ರತಿಭೆ ಅಲ್ಲಿಯೇ ಮೊಟಕುಗೊಳ್ಳಬಾರದು. ಅದನ್ನು ಪೋಷಿಸುವ ಜವಾಬ್ದಾರಿ ಪಾಲಕರಷ್ಟೇ ಸಮಾಜದ್ದೂ ಇದೆ ಎಂದು ಉಡುಪಿ ಜಿಲ್ಲಾ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದರು.
ಮಣಿಪಾಲದಲ್ಲಿ ಡಾ.ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನ.17ರಂದು ಆಯೋಜಿಸಿದ್ದ 10ನೇ ವರ್ಷದ ಪ್ರಮಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮಾ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್ನ ಅಧ್ಯಕ್ಷೆ ದೇವಕಿ ಕೆ. ಭಟ್, ಪದಾಧಿಕಾರಿಗಳಾದ ಡಾ. ಬಾಲಚಂದ್ರ ಆಚಾರ್, ವಿದುಷಿ ಪವನಾ ಬಿ. ಆಚಾರ್ ಉಪಸ್ಥಿತರಿದ್ದರು.
ಟ್ರಸ್ಟ್ನ ಡಾ. ಅನಸೂಯಾದೇವಿ ಸ್ವಾಗತಿಸಿದರು. ನಮ್ರತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.