ನಾಲ್ಕು ಜೀವಗಳ ರಕ್ಷಣೆ ಮಾಡಿ ಪ್ರಾಣ ಕಳೆದುಕೊಂಡ ವೃದ್ಧ!

Munihanumayya
Published on

ಬೆಂಗಳೂರು: ಇದು ಜೀವ ಉಳಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಂಥ ಪ್ರಕರಣ. ವೃದ್ಧರೊಬ್ಬರು ನಾಲ್ಕು ಜೀವಗಳನ್ನು ರಕ್ಷಣೆ ಮಾಡಿ, ಇನ್ನೇನು ಮತ್ತೆರಡು ಜೀವಗಳ ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾಘಟ್ಟ ಗ್ರಾಮದ ಮುನಿಹನುಮಯ್ಯ (60) ಸಾವಿಗೀಡಾದ ವೃದ್ಧ. ಕಳೆದ ಮಂಗಳವಾರ ಇವರ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಹೊತ್ತಿಕೊಂಡಿತ್ತು. ಆಗ ಧಾವಿಸಿದ್ದ ಇವರು ನಾಲ್ಕು ಜಾನುವಾರು ರಕ್ಷಣೆಗಳನ್ನು ರಕ್ಷಿಸಿದ್ದಾರೆ. ಆದರೆ ಇನ್ನೆರಡು ಜಾನುವಾರುಗಳನ್ನು ರಕ್ಷಣೆ ಮಾಡಬೇಕು ಎಂಬರಷ್ಟರಲ್ಲಿ ಬೆಂಕಿ ಇವರಿಗೂ ತಗುಲಿದೆ.

ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದ ಇವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಇವರು ಇಂದು ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net