ಯುವ ಸ್ಕೇಟಿಂಗ್ ತಾರೆ ದುರಂತ ಅಂತ್ಯ...

staking for web
Published on

ಮಾಸ್ಕೋ: ಆಸ್ಟ್ರೇಲಿಯಾದ ಸ್ಟಾರ್​ ಸ್ಕೇಟಿಂಗ್ ಪಟು, 2018ರ ವಿಂಟರ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ಅಲೆಕ್ಸಾಂಡ್ರೊವಾಸ್ಕಾಯಾ ದುರಂತ ಅಂತ್ಯಕಂಡಿದ್ದಾರೆ. ರಷ್ಯಾ ವೆಬ್​ಸೈಟ್​ ವರದಿಯಂತೆ, 2 ಬಾರಿ ಆಸ್ಟ್ರೇಲಿಯ ಚಾಂಪಿಯನ್​ 20 ವರ್ಷದ ಅಲೆಕ್ಸಾಂಡ್ರೊವಾಸ್ಕಾಯಾ, ಕಿಟಕಿಯಿಂದ ಹೊರಬಿದ್ದು ಸಾವನ್ನಪ್ಪಿದ್ದಾರೆ. 23 ವರ್ಷ ಪಾರ್ಟನರ್​ ಹಾರ್ಲೆ ವಿಂಡ್ಸೊರ್​ ಜತೆಗೂಡಿ 2 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. 10 ವರ್ಷ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಮೊದಲ ಆಸ್ಟ್ರೇಲಿಯ ಸ್ಕೇಟಿಂಗ್​ ಜೋಡಿ ಎನಿಸಿಕೊಂಡಿತು. 2018ರ ಪೆಯಾಂಗ್​ ಚಾಂಗ್​ ಕೂಟದಲ್ಲಿ ಈ ಜೋಡಿ ಶಾರ್ಟ್​ ಪ್ರೋಗ್ರಾಂನಲ್ಲಿ 18ನೇ ಸ್ಥಾನಗಳಿಸಿತ್ತು. ಇದರೊಂದಿಗೆ ಅಗ್ರ 16 ಫ್ರೀ ಸ್ಟೇಕ್​ ಹಂತಕ್ಕೇರಲು ವಿಫಲವಾಗಿತ್ತು.

2000ದಲ್ಲಿ ರಷ್ಯಾದಲ್ಲಿ ಜನಿಸಿದ ಅಲೆಕ್ಸಾಂಡ್​, ಆಸ್ಟ್ರೇಲಿಯ ಪ್ರತಿನಿಧಿಸುತ್ತಿದ್ದರು. ಜೂನಿಯರ್​ ಸ್ಕೇಟಿಂಗ್​ನ ಹಲವು ಅಂತಾರಾಷ್ಟ್ರೀಯ ಕೂಟಗಳಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಆರೋಗ್ಯದ ಕಾರಣದಿಂದ 2019ರಲ್ಲಿ ಅಲೆಕ್ಸಾಂಡ್ರೊವಾಸ್ಕಾಯಾ ವೃತ್ತೀಜಿವನದಿಂದ ನಿವೃತ್ತಿ ಹೊಂದಿದರು. ಸ್ಕೇಟಿಂಗ್​ ಪಟುವಿನ ನಿಗೂಢ ಸಾವಿನ ಪ್ರಕರಣವನ್ನು ರಷ್ಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net