ಅರ್ಧ ಏಕಾಹ ಭಜನೆ ಸಮಾಪನ

Published on

ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ 61ನೇ ವರ್ಷದ ನಗರ ಭಜನೆ, ಅರ್ಧ ಏಕಾಹ ಭಜನೆ ಗುರುವಾರ ಸೂರ್ಯೋದಯಕ್ಕೆ ಸಮಾಪನಗೊಂಡಿತು.

9 ದಿನಗಳ ಕಾಲ ನಡೆದ ನಗರಭಜನಾ ಸಂಕೀರ್ತನೆ ಹಾಗೂ ಬುಧವಾರ ಸೂರ್ಯಾಸ್ತಮಾನದಿಂದ ಪ್ರಾರಂಭಗೊಂಡ ಅರ್ಧ ಏಕಾಹ ಭಜನೆ ಗುರುವಾರ ಸೂರ್ಯೋದಯಕ್ಕೆ ಮಹಾಮಂಗಳರಾತಿ ನಡೆಯುವುದರೊಂದಿಗೆ ಪೂರ್ಣಗೊಂಡಿತು. ದೇವರಿಗೆ ಫಲಪುಷ್ಪಗಳನ್ನು ಸಮರ್ಪಿಸುವ ಉಲ್ಪೆ ಮೆರವಣಿಗೆ, ದೇವರ ದೊಡ್ಡ ಪಲ್ಲಕಿ ಉತ್ಸವ ಹಾಗೂ ನಸುಕಿನ ಸಣ್ಣ ಪಲ್ಲಕಿ ಉತ್ಸವಗಳು ಸಂಭ್ರಮದಿಂದ ನಡೆದವು.

ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಕಾರ್ಯದರ್ಶಿ ಮಾಧವ ಆಚಾರ್ಯ, ಪ್ರಮುಖರಾದ ಪ್ರಶಾಂತ್ ನೆಕ್ಕಿಲಾಡಿ, ಕುಮಾರ ಕಿಶನ್, ಯತೀಶ್ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಐ.ಜಯಂತ ನಾಯಕ್, ಕೆ.ಜಗದೀಶ್ ಶೆಟ್ಟಿ, ಕೆ.ಸುಧಾಕರ ಶೆಟ್ಟಿ, ಕೀರ್ತನ್ ಕುಮಾರ್, ವಿದ್ಯಾಲಕ್ಷ್ಮೀ ಪ್ರಭು, ಕರಾಯ ರಾಘವೇಂದ್ರ ನಾಯಕ್, ಎನ್.ಉಮೇಶ್ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಗಣೇಶ್ ಬಿ., ಎಂ.ವರದರಾಜ್, ರಾಧಾಕೃಷ್ಣ ನಾಯಕ್, ಕರುಣಾಕರ ಸುವರ್ಣ, ಧನ್ಯಕುಮಾರ್ ರೈ, ಸುಂದರ ಗೌಡ, ಕೃಷ್ಣ ಕೋಟೆ, ಹರೀಶ್ ಭಂಡಾರಿ, ಅಶೋಕ್ ಕುಮಾರ್ ರೈ, ವಿನೋದ್ ಕುಮಾರ್, ಶಶಿಧರ್ ಶೆಟ್ಟಿ, ಶಕಿಲಾ ಕುಂದರ್, ಜಯಪ್ರಕಾಶ್ ಶೆಟ್ಟಿ, ಐ.ಸುಧಾಕರ ನಾಯಕ್, ಗಿರೀಶ್ ನಾಯಕ್, ಹರೀಶ್ ಶೆಟ್ಟಿ, ಐ.ಪುರುಷೋತ್ತಮ ನಾಯಕ್, ಎನ್.ಗೋಪಾಲ ಹೆಗ್ಡೆ, ಶಿವ ಕುಮಾರ್, ಉಷಾ ಮುಳಿಯ, ಶ್ಯಾಮಲಾ ಶೆಣೈ, ಸುಜಾತ ಕೃಷ್ಣ ಆಚಾರ್ಯ, ಅನೀಶ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net