ಡೆರೆಕ್​ ಓ ಬ್ರಿಯಾನ್, ಸಂಜಯ್ ಸಿಂಗ್ ಸೇರಿ 8 ರಾಜ್ಯಸಭಾ ಸದಸ್ಯರ ಅಮಾನತು

Rajyasabha session
Published on

ನವದೆಹಲಿ: ರಾಜ್ಯಸಭೆ ಕಲಾಪದ ವೇಳೆ ಅಸಭ್ಯ ವರ್ತನೆ ತೋರಿದ ಟಿಎಂಸಿ ಸದಸ್ಯ ಡೆರೆಕ್ ಓ ಬ್ರಿಯಾನ್ ಸಂಜಯ್​ ಸಿಂಗ್ ಸೇರಿ 8 ವಿಪಕ್ಷ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇಂದು ಅಮಾನತು ಮಾಡಿದ್ದಾರೆ.

ರಾಜ್ಯಸಭೆ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು, ನಿನ್ನೆ ಕಲಾಪದ ವೇಳೆ ನಡೆದ ಘಟನೆ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದರು. ಡೆಪ್ಯುಟಿ ಚೇರ್​ಮನ್​ ಮೇಲೆ ದೈಹಿಕ ಆಕ್ರಮಣದ ಬೆದರಿಕೆ ಒಡ್ಡಿರುವುದು ಸರಿಯಲ್ಲ. ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಲಾಗಿದೆ. ಸಂಸದರು ಈ ವಿಷಯವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಷ್ಟು ಹೇಳಿದ ಬಳಿಕ ಅಧ್ಯಕ್ಷರು, ಡೆಪ್ಯುಟಿ ಚೇರ್​ಮನ್ ವಿರುದ್ಧದ ಅವಿಶ್ವಾಸಗೊತ್ತುವಳಿಯನ್ನು ನಿಯಮಾವಳಿ ಪ್ರಕಾರ ಸ್ವೀಕರಿಸಲಾಗದು ಎಂದು ಸ್ಪಷ್ಟಪಡಿಸಿದರಲ್ಲದೆ, ನಿನ್ನೆ ದುರ್ವರ್ತನೆ ತೋರಿದ ಎಂಟು ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ ಘೋಷಿಸಿದರು.

ಈ ಪಟ್ಟಿಯಲ್ಲಿ ಸದಸ್ಯರಾದ ಡೆರೆಕ್ ಓ ಬ್ರಿಯಾನ್​, ಸಂಜಯ್ ಸಿಂಗ್, ರಾಜು ಸತವ್​, ಕೆಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್​, ಸೈಯದ್​ ನಾಝಿರ್ ಹುಸೇನ್​, ಎಲಮಾರನ್ ಕರೀಮ್ ಸೇರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net