ಏಕತೆ ಭಾವನೆಯಿಂದ ಸಾಮಾಜಿಕ ಸಾಮರಸ್ಯ: ಸಹಾಯಕ ಧರ್ಮಗುರು ಸ್ಟೀವನ್ ಜೋಯಲ್ ಕುಟಿನ್ನೊ ಅಭಿಮತ

milad (1)
Published on

ಕಿನ್ನಿಗೋಳಿ: ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿರಬೇಕು. ಆಗ ಸಾಮರಸ್ಯದ ಬದುಕು ಸಾಧ್ಯ ಎಂದು ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ಸಹಾಯಕ ಧರ್ಮಗುರು ಸ್ಟೀವನ್ ಜೋಯಲ್ ಕುಟಿನ್ನೊ ಹೇಳಿದರು.

ಕಿನ್ನಿಗೋಳಿ ಸಮೀಪದ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ ಆಶ್ರಯದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಬಾಂಧವರ ಒಗ್ಗೂಡುವಿಕೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ 16ನೇ ವರ್ಷದ ಸಾರ್ವಜನಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ವಾತನಾಡಿದರು.

ಡಿ.ವೈ.ಎಫ್.ಐ. ವಾಜಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ವಾತನಾಡಿ, ಮಹಮ್ಮದ್ ಪೈಗಂಬರ್ ಅವರು ಅಂದಿನ ಕಾಲದಲ್ಲಿ ಮುಸ್ಲಿಮರಲ್ಲಿ ಸವಾನತೆ ಹಾಗೂ ಮಹಿಳೆಯರ ಹಕ್ಕಿಗಾಗಿ ದೊಡ್ಡ ಕೊಡುಗೆ ನೀಡಿದ ಸಂತ. ಅವರನ್ನು ನೆನಪಿಸುವುದು ಅತಿ ಅಗತ್ಯ. ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿ ಬೆಳೆದರೂ ಭಗವತ್ ಗೀತೆಯ ಸಾರವನ್ನು ಅರಿತಿದ್ದೇನೆ. ದೇವಿ ಮಹಾತ್ಮೆ ಯಕ್ಷಗಾನವನ್ನೂ ಅನೇಕ ಬಾರಿ ನೋಡಿದ್ದೇನೆ. ಬಾಲ್ಯದಿಂದಲೂ ಎಲ್ಲರೊಂದಿಗೆ ಕೂಡಿ ಬಾಳಿದ್ದೇನೆ ಎಂದರು.

ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಾಸುದೇವ ಬೆಳ್ಳೆ, ಬಯಲಾಟ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಸಮಿತಿಯ ಕಾರ್ಯದರ್ಶಿ ವಸಂತ್ ಶೆಟ್ಟಿಗಾರ್ ಮತ್ತಿತರರಿದ್ದರು. ಇಪತ್ರಕರ್ತ ಮಿಥುನ್ ಉಡುಪ ಕೊಡೆತ್ತೂರು ಅವರನ್ನು ಗೌರವಿಸಲಾಯಿತು. ಕೆ.ಎ.ಖಾದರ್ ಸ್ವಾಗತಿಸಿದರು. ಹೆರಿಕ್ ಪಾಯಸ್ ಸನ್ಮಾನಿತರನ್ನು ಪರಿಚಯಿಸಿದರು. ಶಶಿಸುರೇಶ್ ನಿರೂಪಿಸಿದರು.

ಕಿನ್ನಿಗೋಳಿ ಪ್ರದೇಶದಲ್ಲಿ ಸಾರ್ವಜನಿಕ ಬಯಲಾಟ ಸಮಿತಿಯ ಕೆಲಸ ಶ್ಲಾನೀಯ. ಕಳೆದ 65 ವರ್ಷಗಳಿಂದ ಯಕ್ಷಗಾನ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 58 ವರ್ಷಗಳಿಂದ ಕ್ರಿಸ್‌ಮಸ್, 16 ವರ್ಷಗಳಿಂದ ಈದ್‌ಮಿಲಾದ್ ಆಚರಣೆ ಇತರರಿಗೆ ಮಾದರಿ. ಮುನೀರ್ ಕಾಟಿಪಳ್ಳ, ಡಿ.ವೈ.ಎಫ್.ಐ. ವಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net