ಚರ್ಮರೋಗದಿಂದ ಋಣಾತ್ಮಕ ಭಾವನೆ ಹೆಚ್ಚಳ : ಡಾ.ವೈ.ಅಬ್ದುಲ್ಲಾ ಕುಂಞಿ ಮಾಹಿತಿ

pigmentarycon
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರಸ್ತುತ ದಿನಗಳಲ್ಲಿ ಚರ್ಮರೋಗ ಸಾಮಾನ್ಯ ಎನಿಸಿದೆ. ಇದು ಮನುಷ್ಯನಲ್ಲಿ ಋಣಾತ್ಮಕ ಭಾವನೆ ಬೆಳೆಸುವುದರಿಂದ ಕಾಯಿಲೆ ಬರುವ ಮೊದಲೇ ಜಾಗೃತರಾಗಿರುವುದು ಮುಖ್ಯ ಎಂದು ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಅಬ್ದುಲ್ಲಾ ಕುಂಞಿ ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಮತ್ತು ಯೆನೆಪೋಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಕರಾವಳಿ ಡರ್ಮಟಾಲೋಜಿಸ್ಟ್ ಸೊಸೈಟಿ (ಐಎಡಿವಿಎಲ್ ಕರಾವಳಿ) ಸಹಯೋಗದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಎಬಿಎಸ್‌ಎಂ ಐಡಿಎಸ್ ಆವಿಷ್ಕಾರ್ ಸಭಾಂಗಣದಲ್ಲಿ ಎರಡು ದಿನಗಳ ಪಿಗ್ಮೆಂಟರಿ ಡಿಸಾರ್ಡರ್ಸ್ ಸೊಸೈಟಿಯ ಚರ್ಮರೋಗ ಸಂಬಂಧಿತ 6ನೇ ವಾರ್ಷಿಕ ಸಮ್ಮೇಳನ ‘ಪಿಗ್ಮೆಂಟರಿಕಾನ್ 2024’ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಮಾತನಾಡಿದರು. ಸಮ್ಮೇಳನ ಸ್ಮರಣ ಸಂಚಿಕೆ ಡಾ.ಸುರಭಿ ಸಿನ್ಹಾ ಬಿಡುಗಡೆಗೊಳಿಸಿದರು. ಪಿಗ್ಮೆಂಟರಿ ಡಿಸಾರ್ಡರ್ಸ್ ಸೊಸೈಟಿ ಅಧ್ಯಕ್ಷೆ ಡಾ.ರಶ್ಮಿ ಸರ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ.ಗಿರೀಶ ಬಿ.ಎಸ್., ಡಾ.ಮಾಲಾ ಭಲ್ಲಾ, ಡಾ.ಶ್ರೀಚರಿತ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕ ಡಾ.ವಿಶಾಲ್ ಅಮೀನ್ ಬಿ. ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ.ಮಂಜುನಾಥ್ ಶೆಣೈ ಎಂ. ಪ್ರಸ್ತಾವನೆಗೈದರು. ಡಾ.ಸ್ಪಂದನಾ ಹೆಗ್ಡೆ ಅತಿಥಿ ಪರಿಚಯ ನೀಡಿದರು. ಡಾ.ಭವೇಶ್ ಸ್ವರ್ಣಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net