ಕಾಸರಗೋಡಿನಲ್ಲಿ ಸಂಭ್ರಮದ ಈದುಲ್ ಫಿತ್ರ್

33
Published on

ಕಾಸರಗೋಡು: ಜಿಲ್ಲಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಸೋಮವಾರ ಆಚರಿಸಲಾಯಿತು. ಭಾನುವಾರ ರಾತ್ರಿ ಚಂದ್ರ ದರ್ಶನವಾಗುವುದರೊಂದಿಗೆ ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರ್ತಿಗೊಳಿಸಿ, ಸೋಮವಾರ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ತಳಂಗರೆ ಮಾಲಿಕ್‌ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಕಾಸರಗೋಡು ನಗರ, ನಾಯಮರ್‌ಮೂಲೆ, ಉದುಮ, ಕಾಞಂಗಾಡಿನ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ, ಈದುಲ್ ಫಿತ್ರ್ ವಿಶೇಷ ನಮಾಜ್ ನಡೆಯಿತು.

ಕಾಸರಗೋಡು ಕೆಎನ್‌ಎಂ ಟೌನ್ ವತಿಯಿಂದ ಸಲಫಿ ಜುಮಾ ಮಸೀದಿ ನೇತೃತ್ವದಲ್ಲಿ ಪ್ರೆಸ್ ಕ್ಲಬ್ ಮೈದಾನದಲ್ಲಿ ಈದ್ ಗಾಹ್ ಆಯೋಜಿಸಲಾಗಿತ್ತು. ಖತೀಬ್ ಚುಝಾಲಿ ಅಬ್ದುಲ್ಲಾ ಮೌಲವಿ ಪ್ರಾರ್ಥನೆ, ಖುತ್ಬಾಕ್ಕೆ ನೇತೃತ್ವ ನೀಡಿದರು. ಹಾರಿಸ್ ಚೇರೂರು, ಇಬ್ರಾಹಿಂ ಕೆ.ಪಿ., ಹಾಶಿಂ ಕೊಲ್ಲಂಪಾಡಿ, ಅಬ್ದುಲ್ ಜಲೀಲ್ ಎ.ಕೆ., ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net