Egyptian Mummies : ಈಜಿಪ್ಟಿನ ಪಿರಮಿಡ್‌ಗಳು ಜಗತ್ತಿನ ಅದ್ಭುತಗಳಲ್ಲಿ ಒಂದಾಗಿದೆ. 5000 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದ್ದರೂ, ಹಾನಿಗೊಳಗಾದೆ ಇನ್ನೂ ಎತ್ತರವಾಗಿ ಮತ್ತು ಭವ್ಯವಾಗಿ ನಿಂತಿವೆ. ಪಿರಮಿಡ್‌ಗಳು ಪ್ರಪಂಚದ ನಿಗೂಢ ಇತಿಹಾಸದ ಸಂಕೇತವಾಗಿವೆ.
ನಿಧನರಾಗಿ 5,000 ವರ್ಷಗಳು ಕಳೆದರೂ ಈಜಿಪ್ಟ್ ರಾಜರ ಮೃತದೇಹಗಳನ್ನು ಇಂದಿಗೂ ಪಿರಮಿಡ್‌ಗಳಲ್ಲಿ ಸಂರಕ್ಷಿಸಲಾಗಿದೆ. ಇದರ ಬಗ್ಗೆ ಒಂದು ಅಧ್ಯಯನ ನಡೆಸಲಾಗಿದ್ದು, ರಾಜರ ಮೃತದೇಹಗಳು ಇಂದಿಗೂ ಕೊಳೆಯದಿರುವುದಕ್ಕೆ ಕಾರಣ ಏನೆಂಬುದು ಸಂಶೋಧಕರನ್ನು ಅಚ್ಚರಿಗೊಳಿಸಿದೆ.
ಮಮ್ಮಿಫಿಕೇಶನ್ ಎಂದು ಕರೆಯಲ್ಪಡುವ ಈ ಸಂರಕ್ಷಣೆಯನ್ನು ಈಜಿಪ್ಟಿನವರು ಕ್ರಿ.ಶ. 4ನೇ ಶತಮಾನದಲ್ಲಿ ಆಚರಿಸಿದರು. ಮಮ್ಮಿಫಿಕೇಶನ್ ಪ್ರಕ್ರಿಯೆಯಲ್ಲಿ, ಮೆದುಳಿನಂತಹ ಹಾಳಾಗುವ ಆಂತರಿಕ ದೇಹದ ಭಾಗಗಳನ್ನು ಮೊದಲು ತೆಗೆದುಹಾಕಲಾಗುತ್ತದೆ.
ಇದನ್ನೂ ಓದಿ: ಇಂದು ನಮ್ಮ ಮೊದಲ ರಾತ್ರಿ… ಮದ್ವೆಯಾದ ಬೆನ್ನಲ್ಲೇ ಖಾಸಗಿ ಫೋಟೋಗಳನ್ನು ಹಂಚಿಕೊಂಡ ದಂಪತಿ! First Night
ಮೆದುಳಿನ ಬಳಿಕ ವ್ಯಕ್ತಿಯ ಕೇಂದ್ರಬಿಂದು ಎಂದು ನಂಬಿರುವ ಹೃದಯವನ್ನು ಹೊರತುಪಡಿಸಿ ಹೊಟ್ಟೆಯ ಎಲ್ಲ ಅಂಗಗಳನ್ನು ತೆಗೆದುಹಾಕಲಾಗುತ್ತದೆ. ಮುಂದಿನ ಹಂತ ಏನೆಂದರೆ, ದೇಹದಿಂದ ಎಲ್ಲ ತೇವಾಂಶವನ್ನು ತೆಗೆದುಹಾಕಿ, ದೇಹವನ್ನು ಸಂರಕ್ಷಿಸಲು, ಒಣಗಿಸಲು ಮತ್ತು ಹಾಳಾಗುವುದನ್ನು ತಡೆಯಲು ಒಂದು ರೀತಿಯ ಉಪ್ಪಿನಿಂದ ಮುಚ್ಚಲಾಗುತ್ತದೆ.
ಇದಲ್ಲದೆ, ದೇಹಗಳನ್ನು ಕೆಡದಂತೆ ರಕ್ಷಿಸಲು ಎಣ್ಣೆಗಳು, ಮೇಣಗಳು ಮತ್ತು ಸುಗಂಧ ದ್ರವ್ಯಗಳು ಸೇರಿದಂತೆ ಅನೇಕ ವಸ್ತುಗಳನ್ನು ಬಳಸಲಾಗುತ್ತಿತ್ತು. ಈ ಸುಗಂಧ ದ್ರವ್ಯಗಳು ದೇಹಗಳನ್ನು ಕೊಳೆಯದಂತೆ ಸಂರಕ್ಷಿಸಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. (ಏಜೆನ್ಸೀಸ್)
ಇಂದು ನಮ್ಮ ಮೊದಲ ರಾತ್ರಿ… ಮದ್ವೆಯಾದ ಬೆನ್ನಲ್ಲೇ ಖಾಸಗಿ ಫೋಟೋಗಳನ್ನು ಹಂಚಿಕೊಂಡ ದಂಪತಿ! First Night