Actress Trisha : ಬಹುಭಾಷಾ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ತ್ರಿಷಾ ಅವರು ಕೊನೆಯದಾಗಿ ಸೂಪರ್ಸ್ಟಾರ್ ಅಜಿತ್ ಅಭಿನಯದ ವಿಡಾ ಮುಯಾರ್ಚಿ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಅಜಿತ್ ಅವರ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ಅಂದಹಾಗೆ ತ್ರಿಷಾ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ತ್ರಿಷಾ ಅವರು ಇತ್ತೀಚೆಗೆ ತನ್ನ ಪ್ರೀತಿಯ ಸಾಕು ನಾಯಿ ಝೋರೊ ಸಾವಿನ ಸುದ್ದಿಯನ್ನು ಹಂಚಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದರು.
ಈ ಕ್ರಿಸ್‌ಮಸ್‌ನಲ್ಲಿ ನನ್ನ ಮಗ ಝೋರೋ ನಿಧನರಾದನು. ನನ್ನನ್ನು ಚೆನ್ನಾಗಿ ಬಲ್ಲವರಿಗೆ ಝೋರೋ ಕಳೆದುಕೊಂಡ ಬಳಿಕ ನನ್ನ ಜೀವನ ಅರ್ಥಹೀನವಾಗಿದೆ ಎಂಬುದು ತಿಳಿದಿದೆ. ನನ್ನ ಕುಟುಂಬ ಮತ್ತು ನಾನು ಈ ಆಘಾತದಿಂದ ಚೇತರಿಸಿಕೊಂಡಿಲ್ಲ. ನಾನು ಸ್ವಲ್ಪ ಸಮಯದವರೆಗೆ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ತ್ರಿಶಾ ಈ ಹಿಂದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಇದೀಗ ತ್ರಿಷಾ, ತಮ್ಮ ಹೊಸ ಸಾಕು ನಾಯಿಯನ್ನು ಪರಿಚಯಿಸಿದ್ದಾರೆ. ತಮ್ಮ ಕೈಯಲ್ಲಿರುವ ಚಾಕೊಲೇಟ್ ಬಣ್ಣದ ನಾಯಿಯ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಆ ನಾಯಿಗೆ ‘ಇಜ್ಜಿ’ ಎಂದು ಹೆಸರಿಸಲಾಗಿದೆ. ಫೆಬ್ರವರಿ 2 ರಂದು ತ್ರಿಷಾ, ಇಜ್ಜಿಯನ್ನು ದತ್ತು ಪಡೆದರು. ಲೋಕೇಶ್ ಬಾಲಚಂದ್ರನ್ ಎಂಬ ವ್ಯಕ್ತಿ ಇಜ್ಜಿಯನ್ನು ತ್ರಿಷಾಗೆ ನೀಡಿದ್ದಾರೆ. ಕೇವಲ 12 ದಿನಗಳಲ್ಲೇ ಇಜ್ಜಿ, ತ್ರಿಷಾಗೆ ತುಂಬಾ ಹತ್ತಿರವಾಗಿದ್ದಾಳೆ.
ಇದನ್ನೂ ಓದಿ: ಇಂದು ನಮ್ಮ ಮೊದಲ ರಾತ್ರಿ… ಮದ್ವೆಯಾದ ಬೆನ್ನಲ್ಲೇ ಖಾಸಗಿ ಫೋಟೋಗಳನ್ನು ಹಂಚಿಕೊಂಡ ದಂಪತಿ! First Night
‘2/2/2025 ನಾನು ಇಜ್ಜಿಯನ್ನು ದತ್ತು ಪಡೆದ ದಿನ. ನನ್ನ ಜೀವನದಲ್ಲಿ ಸ್ವಲ್ಪ ಬೆಳಕು ಬೇಕಾಗಿದ್ದಾಗ ಲೋಕೇಶ್ ಬಾಲಚಂದ್ರನ್ ನನಗೆ ಇಜ್ಜಿಯನ್ನು ಕೊಟ್ಟರು. ಅವಳು ನನ್ನನ್ನು ಉಳಿಸಿದಳು. ನನ್ನ ಶಾಶ್ವತ ಪ್ರಿಯತಮೆ ಎಂದು ತ್ರಿಷಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್)
5 ಕೋಟಿ ರೂ. ಕೊಟ್ಟರೂ ಸಾಕಾಗಲಿಲ್ಲ… ಮದ್ವೆಯಾದ ಎರಡೇ ದಿನಕ್ಕೆ ನವವಧುವಿಗೆ ವರದಕ್ಷಿಣೆ ಕಿರುಕುಳ! Dowry Harassment
ಈ ಫೋಟೋದಲ್ಲಿರೋ ಮೊಸಳೆ ಗುರುತಿಸಿದ್ರೆ ನೀವೇ ಜೀನಿಯಸ್! ಶೇ.90 ಮಂದಿಯಿಂದ ಸಾಧ್ಯವಾಗಿಲ್ಲ! Optical illusion