

ಬೆಳ್ತಂಗಡಿ: ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ಸುಂದರವಾಗಿಸಲು ಹಾಗೂ ಗಟ್ಟಿಗೊಳಿಸಲು ಶಿಕ್ಷಣ ಅವಶ್ಯ. ಸಮಾಜದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಅತಿಹೆಚ್ಚಿನ ಗಮನ ನೀಡಬೇಕು ಎಂದು ಪ್ರಮುಖರಾದ ಡಾ.ನವೀನ್ ಕುಮಾರ್ ಜೈನ್ ಹೇಳಿದರು.
ಬೆಳ್ತಂಗಡಿಯ ಜೈನ ಮಹಿಳಾ ಸಮಾಜ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿಲ್ಸಭಾಭವನದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಜೈನ ಮಹಿಳಾ ಸಮಾಜದ ಸದಸ್ಯರ ಮಕ್ಕಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.
ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೊ.ತ್ರಿಶಾಲಾ ಜೈನ್ ಅಧ್ಯಕ್ಷತೆ ವಹಿಸಿದ್ದರು. ಜೈನ ಮಹಿಳಾ ಸಮಾಜದ ಹಿರಿಯ ಸದಸ್ಯೆ ಮಮತಾ ಎಂ.ಆರ್.ಜೈನ್ ಹಾಗು ಪ್ರಧಾನ ಕಾರ್ಯದರ್ಶಿ ರಾಜಶ್ರೀ ಎಸ್.ಹೆಗ್ಡೆ, ಕೋಶಾಧಿಕಾರಿ ಅನುಪಮಾ ಜೈನ್, ಉಷಾ ಉಪಸ್ಥಿತರಿದ್ದರು.
ಜೈನ ಸಮಾಜದ ಕಾರ್ಯದರ್ಶಿ ರಾಜಶ್ರೀ ಎಸ್.ಹೆಗ್ಡೆ ಸ್ವಾಗತಿಸಿದರು. ಧವಳಾ ಕಾರ್ಯಕ್ರಮ ಸಂಯೋಜಿಸಿ, ತ್ರಿಶಾಲಾ ವಂದಿಸಿದರು.
ತಾವು ನಮ್ಮ ಸಮಾಜದ ಆಸ್ತಿಯಾಗಬೇಕು ಮಾತ್ರವಲ್ಲದೆ ಯಾವತ್ತೂ ತಮ್ಮ ತಂದೆ ಹಾಗೂ ತಾಯಿ ಮತ್ತು ಗುರುಗಳನ್ನು ಮರೆಯದೆ ತಮ್ಮ ಬದುಕಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜದ ರತ್ನಗಳಾಗಿ ಮಿಂಚಬೇಕು. ಆಗ ನಮ್ಮ ಸಮಾಜದ ಈ ಕಾರ್ಯಕ್ಕೆ ತಾವು ಕೊಡುವ ಬಹಳ ದೊಡ್ಡ ಕೊಡುಗೆಯಾಗುತ್ತದೆ. ಪ್ರೊ.ತ್ರಿಶಾಲ ಜೈನ್ ಜೈನ ಮಹಿಳಾ ಸಮಾಜ ಅಧ್ಯಕ್ಷ