

ಕಟೀಲು: ದೇಶ ಸೇವೆಗೈಯಲು ಸೈನ್ಯಕ್ಕೆ ಸೇರುವುದರಿಂದ ನಮ್ಮ ಶಿಕ್ಷಣ ಅಥವಾ ಯಾವ ವಿಚಾರದಲ್ಲೂ ಸಮಸ್ಯೆಯಾಗುವುದಿಲ್ಲ ಎಂದು ಭಾರತೀಯ ಭೂಸೇನೆಯ ಜೂನಿಯರ್ ಕಮೀಷನರ್ ಆಫೀಸರ್, ಕಟೀಲು ಶಾಲೆಯ ಹಿರಿಯ ವಿದ್ಯಾರ್ಥಿ ಸುಬೇದಾರ್ ಉದಯಚಂದ್ರ ಉಡುಪ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇಗುಲದ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಟೀಲು ದೇವಳದ ರಥ ಬೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಘಟಕದ ವತಿಯಿಂದ ಪಥ ಸಂಚಲನ, ಕಟೀಲು ದೇವಳದ ಆನೆ ಮಹಾಲಕ್ಷ್ಮೀಯಿಂದ ಧ್ವಜವಂದನೆ ನಡೆಯಿತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರು, ಮೊಕ್ತೇಸರರು, ಅರ್ಚಕರು, ಸಿಬ್ಬಂದಿ ವರ್ಗ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.